ಮೀನುಗಾರಿಕೆಯು ರೋಹ್ರುವಿಗೆ ಹೋಗುವ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ಹವ್ಯಾಸ. ಪಬ್ಬರ್ ನದಿಯ ದಡದಲ್ಲಿ ಈ ನಗರ ಇರುವುದರಿಂದಾಗಿ ಮೀನುಗಾರಿಕೆಗೆ ಇಲ್ಲಿ ಹೇರಳ ಅವಕಾಶಗಳಿವೆ. ರೇನ್ಬೋ ಮತ್ತು ಬ್ರೌನ್ ಮೀನುಗಳು ಈ ನದಿಯಲ್ಲಿ ಸಿಗುತ್ತವೆ.
ಸಂಡಸು, ಟಿಕ್ರಿ, ಸೀಮಾ, ಮಂಡಿಲ್ ಮತ್ತು ಧಮ್ವರಿಯು ರೋಹ್ರುವಿನಲ್ಲಿ ಪ್ರಮುಖ ಮೀನುಗಾರಿಕೆ ಸ್ಥಳಗಳು. ಮಹಸೀರ್ ಕೂಡಾ ಇನ್ನೊಂದು ಮೀನುಗಾರಿಕೆ ಪ್ರದೇಶ. ತತ್ತಪತಿ ಪ್ರದೇಶದಲ್ಲಿ ಮೀನುಗಳು ಯಥೇಚ್ಛವಾಗಿ ಸಿಗುತ್ತವೆ.