Search
  • Follow NativePlanet
Share
ಮುಖಪುಟ » ಸ್ಥಳಗಳು» ರಿ ಭೋಯ್

ರಿ ಭೋಯ್ : ಪ್ರಕೃತಿ ಮಾತೆಯ ಮಡಿಲಿನ ತೊಟ್ಟಿಲು

16

ನೊಂಗ್ಪೋಹ್ ಅನ್ನು ತನ್ನ ಜಿಲ್ಲಾ ಕೇಂದ್ರವನ್ನಾಗಿ ಹೊಂದಿದ ರಿ ಭೋಯ್ ಮೇಘಾಲಯದ 11 ಜಿಲ್ಲೆಗಳಲ್ಲಿ ಒಂದಾಗಿದೆ. ರಿ ಭೋಯ್ ಜಿಲ್ಲೆ ದಕ್ಷಿಣ ಗಾರೊ ಹಿಲ್ಸ್ ನಂತರ ಮೇಘಾಲಯದ ಎರಡನೇ ಕನಿಷ್ಠ ಜನನಿಬಿಡತೆ ಹೊಂದಿರುವ ಜಿಲ್ಲೆಯಾಗಿದೆ. ಜಿಲ್ಲೆಯು ಪೂರ್ವದಲ್ಲಿ ಖಾಸಿ ಬೆಟ್ಟಗಳಿಂದ ನಿರ್ಮಾಣವಾಗಿದೆ.

ರಿ ಭೋಯ್ ನ ಮತ್ತು ಸುತ್ತಲಿನ ಪ್ರವಾಸಿ ಸ್ಥಳಗಳು

ರಿ ಭೋಯ್ ನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು, ಬಾರಾ ಪಾನಿ ಎಂದು ಜನಪ್ರಿಯವಾಗಿರುವ ಉಮಿಯಮ್ ಕೆರೆಯಾಗಿದೆ. ಈ ಮಾನವ ನಿರ್ಮಿತ ಸರೋವರ, ಪ್ರಮುಖ ಹೈಡ್ರೊ ವಿದ್ಯುತ್ ಅಣೆಕಟ್ಟನ್ನು ಹೊಂದಿದೆ. ಸರೋವರದ ತನ್ನ ಕ್ರೀಡಾ ಸೌಲಭ್ಯಗಳು ಸಹ ಜನಪ್ರಿಯವಾಗಿದೆ. ಪ್ರವಾಸಿಗರು, ನೀರಿನ ಸೈಕ್ಲಿಂಗ್, ಕಯಾಕಿಂಗ್ ಮತ್ತು  ದೋಣಿ ವಿಹಾರಗಳನ್ನು ಆನಂದಿಸಬಹುದು. ಲುಮ್ ನೆಹರು ಪಾರ್ಕ್ ಸಹ ಪ್ರವಾಸಿಗಳು ನಡುವೆ  ಜನಪ್ರಿಯವಾಗಿದೆ. ರಿ ಭೋಯ್ ನ ಇತರೆ ಪ್ರವಾಸೋದ್ಯಮ ಆಕರ್ಷಣೆಗಳೆಂದರೆ, ಲುಮ್ ಸೋಹ್ ಪೇಟ್ ಬನೇಗ್, ಡಿಂಗೈ ಶಿಖರ ಮತ್ತು ಡ್ವಾರ್ಕ್ ಸುಯಿಡ್.

ರಿ ಭೋಯ್ ತಲುಪಲು ಉತ್ತಮವಾದ ಸಮಯ

ರಿ ಭೋಯ್ ಗೆ ಭೇಟಿ ಮಾಡಲು ಅತ್ಯುತ್ತಮ ಅವಧಿಯೆಂದರೆ ಶುಷ್ಕ ಹಮಾವಾನವನ್ನು ಹೊಂದಿರುವ ಹಾಗೂ ಪ್ರಯಾಣಕ್ಕೆ ಅನುಕೂಲ ಮಾಡಿ ಕೊಡುವ ಬೇಸಿಗೆ ಕಾಲ.

ರಿ ಭೋಯ್ ತಲುಪುವುದು ಹೇಗೆ?

ರಿ ಭೋಯ್ ನ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯಸ್ಥಾನವಾಗಿರುವ ನೊಂಗ್ಪೋಹ್, ಶಿಲ್ಲಾಂಗ್ ನಿಂದ 55 ಕಿಲೋಮೀಟರ್ ದೂರದಲ್ಲಿದೆ. ಇದು ಗೌಹಾಟಿ-ಶಿಲ್ಲಾಂಗ್ ಹೆದ್ದಾರಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ 40, ರಿ ಭೋಯ್ ಜಿಲ್ಲೆಯ ಒಂದು ದೊಡ್ಡ ಪ್ರದೇಶದ ಮೂಲಕ ಹಾದುಹೋಗುತ್ತದೆ. ಪ್ರವಾಸಿಗರು ಸುಲಭವಾಗಿ ಖಾಸಗಿ ಪ್ರವಾಸಿ ವಾಹನಗಳನ್ನು ಹಾಗೆಯೇ ಬಸ್ಸುಗಳ ಮೂಲಕ ಗೌಹಾತಿಯಿಂದ ನೊಂಗ್ಪೋಹ್ ಅನ್ನು ತಲುಪಬಹುದು.

ರಿ ಭೋಯ್ ಹವಾಮಾನ

ರಿ-ಭೋಯ್ ಜಿಲ್ಲೆಯು ಭೂಮಿಯ ಅತ್ಯಂತ ಕೆಳ ಮಟ್ಟದಲ್ಲಿರುವುದರಿಂದ ಪೂರ್ವ ಖಾಸಿ ಬೆಟ್ಟಗಳ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಬೇಸಿಗೆಯನ್ನನುಭವಿಸುತ್ತದೆ. ನೊಂಗ್ಪೋಹ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಷಿಯಸ್ ದಾಟಬಹುದು ಹಾಗೂ ಕನಿಷ್ಠ 4 ಡಿಗ್ರಿ ಸೆ. ನಷ್ಟು ಕೆಳಗಿಳಿಯಬಹುದು.

ರಿ ಭೋಯ್ ಪ್ರಸಿದ್ಧವಾಗಿದೆ

ರಿ ಭೋಯ್ ಹವಾಮಾನ

ಉತ್ತಮ ಸಮಯ ರಿ ಭೋಯ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರಿ ಭೋಯ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 40, ಜಿಲ್ಲೆಗೆ ಜೀವಸೆಲೆಯಂತೆ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಹೆದ್ದಾರಿಯು ಜಿಲ್ಲೆಯಲ್ಲಿ ಎಲ್ಲಿಯೂ ಅಡ್ಡಲಾಗಿ ಸಾಗದೆ ಇದು ಅಕ್ಷರಶಃ ಶಿಲ್ಲಾಂಗ್ ನಿಂದ ಗೌಹಾತಿಯನ್ನು ನೇರವಾಗಿ ಸಂಪರ್ಕಿಸುತ್ತದೆ. ಹೆದ್ದಾರಿಯು ಯಾವಾಗಲೂ ನಿರಂತರ ಬಸ್, ಪ್ರವಾಸಿ ಮತ್ತು ಖಾಸಗಿ ವಾಹನಗಳು ಮತ್ತು ಟ್ರಕ್ ಗಳಿಂದ ಕಾರ್ಯನಿರತವಾಗಿರುತ್ತದೆ. ಇದರಿಂದ ಶಿಲ್ಲಾಂಗ್ ಅಥವಾ ಗೌಹಾತಿಯಿಂದ ನೊಂಗ್ಪೋಹ್ ತಲುಪುವುದು ಸುಲಭ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಿ ಭೋಯ್ ಜಿಲ್ಲೆಯ ಹತ್ತಿರದ ರೈಲ್ವೇ ನಿಲ್ದಾಣವು ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಗೌಹಾತಿ ರೈಲ್ವೆ ನಿಲ್ದಾಣ. ವಾಹನದ ದಟ್ಟಣೆಯಿಂದಾಗಿ, ಗೌಹಾತಿಯಿಂದ ನೊಂಗ್ಪೋಹ್ ತಲುಪಲು ಸುಮಾರು ಒಂದೂವರೆ ಘಂಟೆ ಅವಧಿ ತೆಗೆದುಕೊಳ್ಳುತ್ತದೆ. ಗೌಹಾತಿ ರೈಲು ನಿಲ್ದಾಣ ದೇಶದ ಬಹುತೇಕ ಭಾಗಗಳಿಗೆ ರೈಲು ಸಂಪರ್ಕ ಹೊಂದಿರುವ ದೇಶದ ದಟ್ಟಣೆಯ ನಿಲ್ದಾಣಗಳಲ್ಲಿ ಒಂದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಉಮರೋಯಿ ವಿಮಾನ ನಿಲ್ದಾಣ ಮೇಘಾಲಯದಲ್ಲಿರುವ ಏಕ ಮಾತ್ರ ವಿಮಾನ ನಿಲ್ದಾಣವಾಗಿದ್ದು ರಿ-ಭೋಯಿ ಜಿಲ್ಲೆಗೆ ಸಂಪರ್ಕ ಹೊಂದಿದೆ ಮತ್ತು ಈ ನಿಲ್ದಾಣ ಉಮಿಯಮ್ ಕೆರೆಗೆ ಅತ್ಯಂತ ಹತ್ತಿರವಾಗಿದೆ. ಆದರೆ ಈ ವಿಮಾನ ನಿಲ್ದಾಣದಿಂದ ಕೋಲ್ಕತ್ತಾಕ್ಕೆ ಕೇವಲ ಒಂದೇ ವಿಮಾನದ ಸಂಪರ್ಕವಿದೆ. ಪ್ರವಾಸಿಗರು ಗೌಹಾತಿ ವಿಮಾನ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ನೊಂಗ್ಪೋಹ್ ಗೆ ತಲುಪಲು ರಸ್ತೆ ಮಾರ್ಗವನ್ನು ಆಯ್ಕೆ ಮಾಡಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat