ರತ್ನಾಗಿರಿಯಲ್ಲಿರುವ ಪ್ರವಾಸಿ ತಾಣಗಳಲ್ಲಿ ತಿಲಕ್ ಅಲಿ ವಸ್ತು ಸಂಗ್ರಹಾಲಯ ಆಕರ್ಷಕವಾದ ಸ್ಥಳವಾಗಿದೆ. ಇದು ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರ ಪೂರ್ವಜರು ವಾಸ ಮಾಡಿದ ಬಂಗಲೆಯಾಗಿದೆ. ಇದು ಸ್ಥಳೀಯ ಕೊಂಕಣಿಯರ ವಾಸ್ತಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ ತಾಣವಾಗಿದೆ.
ಈ ವಸ್ತು ಸಂಗ್ರಹಾಲಯದಲ್ಲಿ ಲೋಕಮಾನ್ಯ ತಿಲಕರ ಬದುಕು ಹಾಗೂ ಜೀವನ ಶೈಲಿಗೆ ಸಂಬಂಧಿಸಿದ ಛಾಯಾ ಚಿತ್ರಗಳು ಹಾಗೂ ಇತರ ಅಂದವಾದ ವರ್ಣಚಿತ್ರಗಳನ್ನೂ ಕಾಣಬಹುದು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ದೇಶ ಪ್ರೇಮಿಗಳ ನಡುವೆ ತಿಲಕರ ಬದುಕು ಹಾಗೂ ಹೋರಾಟದ ಸಿದ್ಧಾಂತಗಳೇನು ಎಂಬುದು ಇಲ್ಲಿಗೆ ಭೇಟಿ ನೀಡಿದರೆ ತಿಳಿದು ಬರುತ್ತದೆ.