ರತ್ನಾಗಿರಿಯ ಮಹಾ ದ್ವಾರ ಅಥವಾ ಗೇಟ್ ವೇ ಆಫ್ ರತ್ನಾಗಿರಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿ ನಿರ್ಮಿಸಿರುವ ಬೃಹತ್ ದ್ವಾರವಾಗಿದೆ. ಇದು ರತ್ನಾಗಿರಿಯ ಮಾಂಡವಿ ಸಮುದ್ರ ತೀರದಲ್ಲಿದೆ.
ಈ ಕೋಟೆಯು ಅನೇಕ ಬುರುಜುಗಳ ಮಾದರಿಗಳನ್ನು ಹೊಂದಿದ್ದು, ಇದು ಪ್ರತಿನಿಧಿ ದೋಂಡು ಭಾಸ್ಕರ್ ನಿಂದ ನಿರ್ಮಿತವಾಗಿದೆ. ಈ ರಚನೆಯ ಮೂಲ ಉದ್ದೇಶ ಸಮುದ್ರ ತೀರವನ್ನು ಕಾಪಾಡಿಕೊಳ್ಳುವುದಾಗಿತ್ತು.
ಸಮುದ್ರ ತೀರದ ಹಿತವಾದ ತಂಗಾಳಿ ಹಾಗೂ ಅಲೆಗಳ ಝೇಂಕಾರ ಇಲ್ಲಿಗೆ ಭೇಟಿ ನೀಡುವವರ ಮನಸ್ಸಿನಲ್ಲಿ ಒಂದು ರೀತಿಯ ಧನ್ಯ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವೀಯಾಗುತ್ತದೆ.