Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಹವಾಮಾನ

ರಣಥಂಬೋರ್ ಹವಾಮಾನ

ರಣಥಂಬೋರ್ ಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಎಪ್ರಿಲ್ ನಡುವಿನ ತಿಂಗಳುಗಳು ಹೇಳಿ ಮಾಡಿಸಿದ ತಿಂಗಳುಗಳಾಗಿವೆ.  ಆಗ ಇಲ್ಲಿನ ಹವಾಮಾನವು ಹಿತವಾಗಿದ್ದು, ಮೈಮನಗಳಿಗೆ ಮುದನೀಡುವಂತಿರುತ್ತದೆ. ಅಲ್ಲದೆ ಅನುಕೂಲಕರವಾದ ವಾತಾವರಣದ ಕಾರಣ ಪ್ರಾಣಿಗಳನ್ನು ವೀಕ್ಷಿಸಲು ಈ ಸಮಯವು ಅನುಕೂಲಕರವಾಗಿರುತ್ತದೆ. ಈ ರಾಷ್ಟ್ರೀಯ ಉದ್ಯಾನವನವು ಅಕ್ಟೋಬರ್ ನಿಂದ ಜೂನ್ ವರೆಗು ಪ್ರವಾಸಿಗರಿಗಾಗಿ ತೆರೆದಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜುಲೈ): ರಣಥಂಬೋರ್ ನಲ್ಲಿ ಬೇಸಿಗೆಯು ತುಂಬ ಬಿಸಿಲಿನಿಂದ ಕೂಡಿರುತ್ತದೆ. ಈ ಋತುವು ಮಾರ್ಚ್ ನಲ್ಲಿ ಪ್ರಾರಂಭವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ಆಗ ಇಲ್ಲಿನ ಉಷ್ಣಾಂಶವು 23° ಸೆಲ್ಶಿಯಸ್ ನಿಂದ  38°ಸೆಲ್ಶಿಯಸ್ ವರೆಗೆ ಇರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಜುಲೈ ನಿಂದ ಪ್ರಾರಂಭವಾಗುವ ಮಳೆಗಾಲ ಸೆಪ್ಟಂಬರ್ ಗೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ರಾತ್ರಿ ವೇಳೆ ತಾಪಮಾನವು ಕಡಿಮೆಯಿದ್ದು, ದಿನಗಳು ಗಮನಾರ್ಹವಾಗಿ ಶಾಖಮಯವಾಗಿರುತ್ತವೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ) : ಚಳಿಗಾಲವು ಇಲ್ಲಿ ಅತಿಯಾದ ಚಳಿಯಿಂದ ಕೂಡಿರುತ್ತದೆ. ಅದರಲ್ಲಿಯು ರಾತ್ರಿ ಹೊತ್ತು ಇಲ್ಲಿನ ಚಳಿ ಮೈ ಮರಗಟ್ಟಿಸುವಂತಿರುತ್ತದೆ. ಆಗ  ಇಲ್ಲಿನ ಉಷ್ಣಾಂಶವು ಕನಿಷ್ಠ 9°ಸೆಲ್ಶಿಯಸ್ ನಿಂದ ಗರಿಷ್ಠ   29° ಸೆಲ್ಶಿಯಸ್ ವರೆಗು ಇರುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ರಣಥಂಬೋರ್ ನ ಸಫಾರಿ ಮತ್ತು ಇನ್ನಿತರ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.