ಮಲಿಕ್ ತಲಾವ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕೆರೆಗಳಲ್ಲಿ ಒಂದಾಗಿದೆ. ಈ ಕೆರೆಯು ಇಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರದ ಮತ್ತು ನೀರಿನ ಆಕರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕೆರೆಯು ಪ್ಲೊವರ್ಸ್, ಮೂರ್ ಕೋಳಿಗಳು, ಕೊಕ್ಕರೆಗಳು, ಹಂಸಗಳು , ಮಿಂಚುಳ್ಳಿಗಳು, ಹದ್ದುಗಳು ಮತ್ತು ಗಿಡುಗಗಳಂತಹ ಪಕ್ಷಿಗಳನ್ನು ಬೃಹತ್ ಸಂಖ್ಯೆಯಲ್ಲಿ ತನ್ನತ್ತ ಆಕರ್ಷಿಸುತ್ತಿದೆ. ಈ ಕೆರೆಯ ದಂಡೆಯಲ್ಲಿ ಮೊಸಳೆಗಳು ವಿರಮಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ ಆಗಾಗ ಹುಲಿಗಳನ್ನು ಸಹ ನೋಡಬಹುದು.