ಬಾದಲ್ ಮಹಲ್ ರಣ್‍ಥಾಂಬೋರ್ ಕೋಟೆಯಲ್ಲಿರುವ ಒಂದು ಮಹಲ್ ಆಗಿದ್ದು “ ಮೇಘಗಳ ಅರಮನೆ” ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಕೋಟೆಯ ಉತ್ತರಭಾಗದಲ್ಲಿದೆ. ಆದರು ಈ ಮಹಲ್ ಈಗ ಶಿಥಿಲಾವಸ್ಥೆಯಲ್ಲಿದೆ. ಈ ಮಹಲ್ ಕೋಟೆಯ ಗಾಂಭೀರ್ಯಕ್ಕೆ ಸಾಕ್ಷಿಯಾಗುವ ಅವಕಾಶವನ್ನೊದಗಿಸುತ್ತದೆ. ಪ್ರಸಿದ್ಧವಾದ 84 ಸ್ತಂಭಗಳುಳ್ಳ ರಾಜ ಹಮ್ಮಿರ್ “ ಛಾತ್ರಿ”ಯು ಈ ಸ್ಥಳದಲ್ಲಿ ಹೆಮ್ಮೆಯಿಂದ ನಿಂತಿದೆ. ಇಲ್ಲಿ ಆತನು ತನ್ನ ಸಭೆಗಳನ್ನು ನಡೆಸುತ್ತಿದ್ದನು.