ಝೂಲಾ ದೇವಿ ದೇವಾಲಯ ರಾನಿಖೇತ್ ನಿಂದ 7 ಕಿ.ಮೀ ದೂರದಲ್ಲಿರುವ ಒಂದು ಪ್ರಮುಖ ದೇವಾಲಯ. ಇಲ್ಲಿ ಹಿಂದೂ ದೇವತೆ ದುರ್ಗೆಯನ್ನು ಪೂಜಿಸಲಾಗುತ್ತದೆ. ಇದನ್ನು ಎಂಟನೆಯ ಶತಮಾನದಲ್ಲಿ ಕಟ್ಟಲಾಗಿದೆ. ಹಿಂದೂ ಮಾನ್ಯತಗೆಳ ಪ್ರಕಾರ, ಇದನ್ನು ಈ ಭಾಗದ ವನ್ಯಜೀವಿಗಳ ರಕ್ಷಣೆಗೆ ದುರ್ಗೆ ನೆರವಾಗುತ್ತಾಳೆ ಎಂದು ಕಟ್ಟಲಾಗಿದೆ. ಇಲ್ಲಿರುವ ದುರ್ಗೆಯ ಮೂರ್ತಿಯನ್ನು ಒಬ್ಬ ಕುರಿ ಮೇಯುವಾತ, ತನ್ನ ಕನಸಿನಲಿ ದುರ್ಗೆ ಬಂದು ಹೇಳಿದಳು ಎಂಬ ಕಾರಣದಿಂದ ಕೆತ್ತಿದ ಎಂಬ ಪ್ರತೀತಿ ಇದೆ. ಈ ದೇವಾಲಯವನ್ನು ಮೂರ್ತಿ ಇದ್ದ ಜಾಗದಲ್ಲಿ ಕಟ್ಟಲಾಗಿದೆ.
ಇಲ್ಲಿ ಸುಂದರವಾದ ಕೆತ್ತನೆಯಿರುವ ಘಂಟೆಗಳಿವೆ. ಈ ಘಂಟೆಗಳ ಸದ್ದು ದೂರದೂರದ ವರೆಗೆ ಕೇಳಿಸುತ್ತದೆ. ಇಲ್ಲಿ ಭೇಟಿ ನೀಡುವ ಭಕ್ತರು ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ದೇವಿ ಪೂರೈಸುತ್ತಾಳೆ ಎಂದು ನಂಬಿದ್ದಾರೆ. ಇಲ್ಲಿಯೇ ಸಮೀಪದಲ್ಲಿರುವ ರಾಮನ ದೇವಸ್ಥಾನಕ್ಕೂ ಭಕ್ತರು ಭೇಟಿ ನೀಡಬಹುದಾಗಿದೆ.