ಹೈರಖನ್ ಧಾಮ್, ರಾನಿಖೇತ್ ನಿಂದ 5 ಕಿ.ಮೀ ದೂರದಲ್ಲಿದೆ. ಇಲ್ಲಿನ ನಂಬಿಕೆಯ ಪಕಾರ, ಸಂತ ಹೈರಖನ್ ಬಾಬಾ ಇಲ್ಲಿ 1970 ರಿಂದ 1984 ತನಕ ನೆಲೆಸಿದ್ದರು. ಇಲ್ಲೇ ಇರುವ ಹೈದಖನ್ ದೇವಾಲಯಕ್ಕೂ ಭೇಟಿ ನೀಡಬಹುದು. ಈ ದೇವಾಲಯವನ್ನು ಸ್ವತಃ ಸಂತರೆ ಶಿವನ ಗೌರವಾರ್ಥವಾಗಿ ನಿರ್ಮಿಸಿದ್ದಾರೆ. ಸುತ್ತಲೂ ಇರುವ ಪ್ರಾಕೃತಿಕ ಸೌಂದರ್ಯ ಮತ್ತು ದೂರದಲ್ಲಿ ಕಾಣುವ ಹಿಮಾಲಯ ಪರ್ವತದ ಜೊತೆಗೆ ಇದೊಂದು ಉತ್ತಮ ಪ್ರವಾಸಿ ತಾಣವಾಗಿದೆ.