ರಾನಿಖೇತ್ ನಿಂದ 55 ಕಿ.ಮೀ ದೂರದಲ್ಲಿದ್ದರೂ ಚೌಕುಟಿಯಾ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಇದು ರಾಮಗಂಗಾ ನದಿ ತಟದಲ್ಲಿದೆ. ಇದು ಕುಮಾವೂನ್ ಪದ 'ಚೌ-ಕುಟ್' ನಿಂದ ತನ್ನ ಹೆಸರನ್ನು ಪಡೆದುಕೊಂಡಿತು. ಅದರ ಅರ್ಥ ನಾಲ್ಕು ಕಾಲು ಎಂಬುದಾಗಿದೆ. ಇಲ್ಲಿನ ಸ್ಥಳಕ್ಕೆ ಅದನ್ನು ಅನ್ವಯಿಸಿದರೆ ನಾಲ್ಕು ಕಾಲು ಎಂಬುದು ನಾಲ್ಕು ದಾರಿಗಳು ಎಂಬ ಅರ್ಥವನ್ನು ಕೊಡುತ್ತದೆ. ಮೊದಲ ದಾರಿ ರಾಮನಗರಕ್ಕೆ, ಎರಡನೆಯದು ಕರಣ ಪ್ರಯಾಗ, ಮೂರನೆಯದು ರಾನಿಖೇತ್ ಮತ್ತು ನಾಲ್ಕನೆಯದು ತಡಕ್ ತಾಲ್ ಗೆ ಹೋಗುತ್ತದೆ. ನಾಲ್ಕನೆಯ ದಾರಿಯ ಮೂಲಕ ಖೀರಾ ಎಂಬ ಸ್ಥಳಕ್ಕೂ ತಲುಪಬಹುದಾಗಿದೆ.
ಇದು ಕತ್ಯೂರಿ ರಾಜವಂಶದ ಪಳೆಯುಳಿಕೆ ಮತ್ತು ಕೆಲವು ದೊಡ್ಡ ಕೋಟೆಗಳನ್ನು ಹೊಂದಿದೆ. ಇದು ಮಾವಿನ ಹಣ್ಣು, ಅಕ್ಕಿ ಮತ್ತು ಗೋಧಿ ಬೆಳೆಯಲು ಪ್ರಸಿದ್ಧವಾಗಿದೆ. ಇಲ್ಲಿ ಅಗ್ನೇರಿ ಮತ್ತು ಲಖನ್ಪುರ ದೇವತೆಗಳನ್ನು ಪೂಜಿಸಲಾಗುತ್ತದೆ. ಅಷ್ಟಮಿ ಮೇಳ ಪ್ರತಿ ವರ್ಷ ಅಗ್ನೇರಿ ದೇವಾಲಯದಲ್ಲಿ ಆಯೋಜನೆಗೊಳ್ಳುತ್ತದೆ. ಇಲ್ಲಿ ಮೀನುಹಿಡಿಯಲು ಕೂಡ ಹಲವು ಸ್ಥಳಗಳಿವೆ.