Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ಪಹಾರಿ ಮಂದಿರ್

ಪಹಾರಿ ಮಂದಿರ್, ರಾಂಚಿ

4

ಪಹಾರಿ ಮಂದಿರ್ ಎಂಬುದು ಶಿವನ ಮಂದಿರ. ಇದು ರಾಂಚಿಯ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 2140 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಪ್ರಾಚೀನ ಕಾಲದಲ್ಲಿ ಈ ಬೆಟ್ಟವನ್ನು ಫಾನ್ಸಿ ಟೊಂಗ್ರಿ ಎಂದು ಕರೆಯುತ್ತಿದ್ದರು. ಬ್ರಿಟೀಷರ ಕಾಲದಲ್ಲಿ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೆ ಹಾಕಲಾಗುತ್ತಿತ್ತು. ಅವರ ಸ್ಮರಣಾರ್ಥವಾಗಿ ಇಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದಂದು ಧ್ವಜಾರೋಹಣವನ್ನು ಮಾಡಲಾಗುತ್ತದೆ.

ಈ ದೇವಾಲಯಕ್ಕೆ ತಲುಪಲು 300 ಮೆಟ್ಟಿಲುಗಳನ್ನು ಹತ್ತಿ ಬರಬೇಕು. ಈ ದೇವಾಲಯಕ್ಕೆ ಕೋರಿದ ಹರಕೆಗಳನ್ನು ತೀರಿಸುವಂತಹ ಶಕ್ತಿ ಇದೆಯೆಂದು ನಂಬಲಾಗುತ್ತದೆ. ಈ ಸ್ಥಳದಿಂದ ಸಂಪೂರ್ಣವಾದ ರಾಂಚಿ ನಗರದ ಪಕ್ಷಿನೋಟವನ್ನು ನೋಡಬಹುದು. ಇಲ್ಲಿನ ಸುತ್ತ-ಮುತ್ತ ವಿವಿಧ ಬಗೆಯ ಮರಗಳು ಬೆಳೆದು ನಿಂತಿವೆ. ಶ್ರಾವಣ ಮಾಸದಲ್ಲಿ ಇಲ್ಲಿನ ದೇವಾಲಯದ ಮುಖ್ಯ ದೇವರಿಗೆ ಜಲ ಧಾರವನ್ನು ಅರ್ಪಿಸಲು ಭಕ್ತಾಧಿಗಳು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಆಗ ಈ ದೇವಾಲಯದ ಪ್ರಾಂಗಣ ಮತ್ತು ಸುತ್ತ ಮುತ್ತ ಎಲ್ಲೆಲ್ಲಿಯು ಜನ ಜಾತ್ರೆ ಕಂಡು ಬರುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri