ಸೂರ್ಯನಾರಾಯಣ ದೇವಾಲಯವೆಂದು ಸಹ ಕರೆಯಲ್ಪಡುವ ಸೂರ್ಯ ದೇವಾಲಯವು ರಣಕ್ಪುರದ ಜೈನ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಗತಕಾಲದ ಕಲಾವಿದರ ಶ್ರೇಷ್ಠ ಕಲಾಭಿವ್ಯಕ್ತಿಯನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತದೆ. ಇದರ ಬಹುಭುಜಾಕೃತಿಯ ಗೋಡೆಯ ಮೇಲೆ ಸೈನಿಕರು, ಕುದುರೆಗಳು ಮತ್ತು ದೇವಾನುದೇವತೆಗಳನ್ನು ಕೆತ್ತಲಾಗಿದೆ. ಸೂರ್ಯದೇವನು ತನ್ನ ರಥದಲ್ಲಿ ಹೊರಟಿರುವಂತಹ ಮೂರ್ತಿಯನ್ನು ನಾವು ಇಲ್ಲಿ ಕಾಣಬಹುದು. ದೇಶದ ಎಲ್ಲೆಡೆಯಿಂದ ಭಕ್ತಾಧಿಗಳು ಸೂರ್ಯ ದೇವನ ಅನುಗ್ರಹ ಪಡೆಯಲು ಈ ದೇವಾಲಯಕ್ಕೆ ಭೇಟಿಕೊಡುತ್ತಿರುತ್ತಾರೆ. ಭಕ್ತಾಧಿಗಳು ಇಲ್ಲಿಗೆ ಸಮೀಪದ ಅಂಬಾ ಮಾತಾ ದೇವಾಲಯಕ್ಕು ಸಹ ಭೇಟಿಕೊಡಬಹುದು.