ನಂದನ್ ಸಾರ್ ಸರೋವರ ರಾಜೌರಿ ಜಿಲ್ಲೆಯಲ್ಲಿರುವ ದೊಡ್ಡ ಸರೋವರಗಳಲ್ಲಿ ಒಂದಾಗಿದೆ. ಈ ಸರೋವರ ಅಂಡಾಕಾರದ ಆಕಾರದಲ್ಲಿದ್ದು 1 ಕಿಮೀ ಉದ್ದವಾಗಿದೆ. ನಂದನ್ ಸಾರ್ ಸರೋವರ ಸಮುದ್ರ ಮಟ್ಟದಿಂದ 3500 ಮೀ ಎತ್ತರದಲ್ಲಿದೆ. ಈ ಸ್ಥಳವನ್ನು ತಲುಪಿದ ನಂತರ, ಪ್ರವಾಸಿಗರು ಈ ಸರೋವರದ ನೀರಿನ ಬಣ್ಣ ಕಡು ನೀಲಿ ಬಣ್ಣದಲ್ಲಿರುವುದನ್ನು ಕಾಣಬಹುದು.
ನಂದನ್ ಸಾರ್ ಸರೋವರದ ನೀರು, ಜಾಡಿ ಮಾರ್ಗ ನಾಲೆ/ನಾಲೆಹ್ ನಿಂದ ಹೊರಟು ಕಾಶ್ಮೀರ ಕಣಿವೆಯ ಕೆಳವರೆಗೆ ಹರಿಯುತ್ತದೆ. ನಂದನ್ ಸಾರ್ ಸರೋವರಕ್ಕೆ ಭೇಟಿ ನೀಡಲು ಆಸಕ್ತಿಯುಳ್ಳ ಪ್ರವಾಸಿಗರು ಮೊದಲ ಅಕಾಲ ದರ್ಶಿನಿನಿಂದ ಹತ್ತಿ ನಂತರ ಕಾಶ್ಮೀರ ಜಲಾನಯನದಲ್ಲಿ ಇಳಿಯುವವರೆಗೆ ಸಾಗಬೇಕಾಗುತ್ತದೆ ಹಾಗು ಇದೊಂದು ಅದ್ಭುತ ಪ್ರಯಾಣಾನುಭವವನ್ನು ನೀಡುತ್ತದೆ.