ನಾದ್ ಪುರ್ ಸರಾಯಿ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಇದು ನೌಶೆರಾದಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿದೆ. ಇದು ಮೊಘಲ್ ಅವಧಿಯಲ್ಲಿ ವಿಶ್ರಾಂತಿಯ ಸ್ಥಳವಾಗಿತ್ತು. ಇದು ನಾಲ್ಕೂ ಕಡೆಯಿಂದಲೂ ಗೋಡೆಯಿಂದ ಸುತ್ತುವರೆದಿದ್ದು ಮೇಲೆ ಏಕ ರೂಪದ ಕೈಪಿಡಿ ಗೋಡೆಯಿಂದ ಆವೃತ್ತವಾಗಿದೆ. ಇಲ್ಲಿ ಬಹಳ ಸ್ಥಳಾವಕಾಶ ಇರುವ ದೊಡ್ಡ ಅಂಗಣವೊಂದಿದೆ. ಎರಡು ಸಾಲಿನ ಮೆಚಿಕೊಲೇಷನ್ಸ್ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿಗೆ ಪೂರ್ವ ಮತ್ತು ಪಶ್ಚಿಮದ ಕಡೆಯಿಂದ ಇರುವ ಆಗಮನ ದ್ವಾರದ ಮೂಲಕ ತಲುಪಬಹುದು. ಇಲ್ಲಿ ಕಮಾನುಗಳನ್ನು ನಾವು ಕಾಣಬಹುದು.