ಕಟೋರಿ ಸಾರ್ ರಾಜೌರಿ ಜಿಲ್ಲೆಯಲ್ಲಿರವ ಸಣ್ಣ ಸರೋವರಗಳಲ್ಲಿ ಒಂದು. ಇದೊಂದು ಬೌಲ್/ ಬಟ್ಟಲಿನ ಆಕಾರದ ಕೆರೆ. ಈ ಸರೋವರ ಸಮುದ್ರ ಮಟ್ಟದಿಂದ 3300 ಮೀ ಎತ್ತರದಲ್ಲಿದ್ದು, ಬೇಲಾ ಮಾರ್ಗ್ ದ ಪಶ್ಚಿಮದ ಕೊನೆಯಲ್ಲಿದೆ. ಕಟೋರಿ ಸಾರ್ ನೈಸರ್ಗಿಕವಾಗಿ, ಹಿಮ ಕರಗುವಿಕೆಯಿಂದ ಉಂಟಾಗುವ ಸರೋವರವಾಗಿದ್ದು, ಸೆಪ್ಟೆಂಬರ್ ಅಂತ್ಯದಲ್ಲಿ ಬತ್ತಿಹೋಗುತ್ತದೆ.