ದೆಹ್ರಾ ಕಿ ಗಲಿ ರಾಜೌರಿ ಜಿಲ್ಲೆಯಲ್ಲಿ ಶಿಖರಗಳ ಮಧ್ಯೆ ಹಾಗೂ ದಟ್ಟ ಅರಣ್ಯದಲ್ಲಿ ಇರುವ ತಾಣವಾಗಿದೆ. ಈ ತಾಣ ರಾಜ್ಯದ ಮೊತ್ತ ಮೊದಲ ಇಕೋ ಟೂರಿಸಂ ಆಗಿದ್ದು ಪೀರ್ ಪಂಜಾಲ್ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 6600 ಅಡಿ ಎತ್ತರದಲ್ಲಿದೆ. ದೆಹ್ರಾ ಕಿ ಗಲಿ ಇಲ್ಲಿರುವ ಎತ್ತರವಾದ ಸ್ಥಳಗಳಲ್ಲಿರುವ ಸರೋವರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ತಲುಪಿದ ಬಳಿಕ ಬೆಕೋನ್ ಯೋಜನೆಯಡಿ ಇಲ್ಲಿ ಕಟ್ಟಲಾಗಿರುವ ಒಂದು ಕೊಠಡಿಯ ವಾಸದ ಮನೆಗಳ ಸಾಲುಗಳನ್ನು ಕಾಣಬಹುದಾಗಿದೆ. ಇಲ್ಲಿ ಚಳಿಗಾಲದಲ್ಲಿ ಭಾರಿ ಮಂಜು ಬೀಳುವ ಕಾರಣ ಈ ಅವಧಿಯಲ್ಲಿ ಇಲ್ಲಿ ಭೇಟಿ ನೀಡದಿರುವುದು ಸೂಕ್ತವಾಗಿದೆ.