Search
  • Follow NativePlanet
Share
ಮುಖಪುಟ » ಸ್ಥಳಗಳು» ರಜ್ನಾಂದಗಾವ್

ರಜ್ನಾಂದಗಾವ್ : ದೇವಿಯರನಾಡು

13

ಛತ್ತೀಸಘಡದ ದುರ್ಗ್ ಜಿಲ್ಲೆಯ ವಿಭಜನೆಯ ಫಲವಾಗಿ ಜನೇವರಿ 26, 1973 ರಲ್ಲಿ ಜನ್ಮತಾಳಿದ ಹೊಸಜಿಲ್ಲೆಯೇ ರಜ್ನಾಂದಗಾವ್. ಇಲ್ಲಿನ ನಿವಾಸಿಗಳ ಧರ್ಮ ಸಹಿಷ್ಣುತೆ, ಶಾಂತ ಚಿತ್ತ ಹಾಗು ಹೊಂದಾಣಿಕಾ ಮನೋಭಾವಗಳು ಈ ಸ್ಥಳಕ್ಕೆ ಶಂಸ್ಕಾರಧಾನಿ ಎಂಬ ಇನ್ನೊಂದು ನಾಮಧೇಯವನ್ನು ತಂದು ಕೊಟ್ಟಿವೆ. ನದಿ, ಕೆರೆಗಳಿಂದ ತುಂಬಿರುವ ಈ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಮತ್ತು ಉದ್ದಿಮೆಗಳೇ ಹೆಚ್ಚು.

ದುರ್ಗ್ ಮತ್ತು ಬಸ್ತಾರ್ ಜಿಲ್ಲೆಗಳು ಕ್ರಮವಾಗಿ ಪೂರ್ವ ಮತ್ತು ದಕ್ಷಿಣದ ನೆರೆ ಜಿಲ್ಲೆಗಳಾಗಿದ್ದು, ರಾಜಧಾನಿ ರಾಯ್ಪುರದಿಂದ ರಜ್ನಾಂದಗಾವ್, ಕೇವಲ  64 ಕಿ.ಮೀ ದೂರದಲ್ಲಿದೆ. ಈ ಪ್ರದೇಶದಲ್ಲಿ ವಾಯುನೆಲೆಯೊಂದನ್ನು ನಿರ್ಮಿಸುವ ಯೋಜನೆಯೂ ಕೇಳಿಬರುತ್ತಿದೆ.

ಪ್ರಾಚೀನ ಭಾರತದಲ್ಲಿ ಹಲವಾರು ರಾಜಮನೆತನಗಳಿಂದ ಆಳಿಸಿ ಕೊಂಡ ರಜ್ನಾಂದಗಾವಿನ ಮೂಲ ಹೆಸರು ನಂದ್-ಗ್ರಾಮ್. ಸೋಮವಂಶಿ, ಕಲಚೂರಿ, ಮರಾಠಾ ಸಾಮ್ರಾರಾಜ್ಯಗಳು ಅವುಗಳಲ್ಲಿ ಪ್ರಮುಖವಾದವುಗಳು. ಇಲ್ಲಿನ ರಾಜಮಹಲುಗಳು, ಅಂದಿನ ಆಡಳಿತಗಾರರು ಹಾಗು ಅಂದಿನ ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತವೆ. ಈ ಅರಮನೆಗಳು ಅಂದಿನ ಸಂಸ್ಕೃತಿ ಹಾಗು ಪದ್ಧತಿಗಳ ಮೇಲೂ ಬೆಳಕು ಚಲ್ಲುತ್ತವೆ.

ರಜ್ನಾಂದಗಾವನ್ನು ಆಳಿದ ಬಹುತೇಕರು ಹಿಂದೂಗಳಾಗಿದ್ದು ವೈಷ್ಣವ ಮತ್ತು ಗಂದ್-ರಾಜರಾಗಿದ್ದರು. ಅಲ್ಲದೇ ಬ್ರಿಟೀಷರ ಕಾಲದಲ್ಲಿಯೂ ರಾಜ್ನಂದಗಾವ್ ಪ್ರಿನ್ಸ್ಲಿ ರಾಜ್ಯಗಳ ರಾಜಧಾನಿಯಾಗಿತ್ತು. ಪ್ರಿನ್ಸ್ಲಿ ರಾಜಗಳ ಕೊನೇಯ ಆಡಳಿತಾಧಿಕಾರಿಯು ಇಲ್ಲಿರುವ ತನ್ನ ಅರಮನೆಯನ್ನು ಕಾಲೇಜು ನಡೆಸಲು ನೀಡಿದ್ದನು.  ಆ ಕಾಲೇಜಿಗೆ ಅವನ ಹೆಸರನ್ನೆ ಇರಿಸಲಾಗಿದೆ.          

ಹಿಂದಿ ಹಾಗು ಛತ್ತೀಸ್ ಘಡಿ ಭಾಷೆಗಳು ಸ್ಥಳಿಯರ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬರುತ್ತವೆ. ಶೈಕ್ಷಣಿಕ ರಂಗದ್ದಲ್ಲೂ  ಹೆಸರು ಮಾಡಿರುವ ರಾಜ್ನಾಂದಗಾವ್ ನಲ್ಲಿ ಅನೇಕ ವಿದ್ಯಾಪೀಠಗಳಿವೆ.ದೀಪಾವಳಿ, ಗಣೇಶ ಚತುರ್ಥಿಗಳು ಇಲ್ಲಿಯ ಪ್ರಮುಖ ಹಬ್ಬಗಳು. ಇವುಗಳನ್ನು ಅತ್ಯಂತ ಉತ್ಸಾಹದಿಂದ ಅದ್ದೂರಿಯಾಗಿ ಆಚರಿಸುವರು. ಈ ಹಬ್ಬಗಳ ಸಂದರ್ಭದಲ್ಲಿ "ಮೊಹರಾ ಮೇಲಾ", "ಗೂಳಿ ಓಡಿಸುವ ಸ್ಪರ್ಧೆ" ಮತ್ತು ಮೀನ ಬಜಾರ್ ಗಳನ್ನು  ಹಮ್ಮಿಕೊಳ್ಳಲಾಗುತ್ತದೆ.

ರಾಜ್ನಾಂದಗಾವಿನ ಒಳ ಮತ್ತು ಹೊರಗಿರುವ ಪ್ರವಾಸೀತಾಣಗಳು

ಗಾಯತ್ರಿ ಮಂದಿರ, ಸಿತ್ಲಾ ಮಂದಿರ, ಬರ್ಫಾನಿ ಆಶ್ರಮ ಗಳಂತಹ ದೇವಾಲಯಗಳು ನಿಜಕ್ಕೂ ನೋಡತಕ್ಕವಾಗಿವೆ. ದೊಂಗ್ರಾಘಾಟಂತೂ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ. ದೊಂಗಾಘಾಟ್ ನ ಬೆಟ್ಟದ ತುದಿಯ ಮೇಲೆ ನೆಲೆಸಿರುವ ಬಂಲೇಶ್ವರಿ ದೇವಿಯ ದೇವಸ್ಥಾನಕ್ಕೆ ಪ್ರತೀ ವರ್ಷ ಹಲವಾರು ಭಕ್ತರು ಬಂದು ಆಶಿರ್ವಾದ ಪಡೆಯುವರು. ಬೆಟ್ಟದ ತುದಿಯ ಮೇಲಿರುವ ಈ ದೇವಾಲಯವು ಬಡಿ  ಬಂಲೇಶ್ವರಿ ದೇವಾಲಯ.

ಛೋಟಿ ಬಂಲೇಶ್ವರಿ ದೇವಾಲಯವು ಬೆಟ್ಟದ ಕೆಳಭಾಗದಲ್ಲಿದೆ. ದಸರಾ ಮತ್ತು ರಾಮನವಮಿ ಹಬ್ಬಗಳಂದು ರಾಜ್ಯಾದ್ಯಂತ ಅನೇಕ ಭಕ್ತರು ಇಲ್ಲಿಗೆ ಬೇಟಿನೀಡುವರು. ಈ ದೇವಾಲಯದ ಆವರಣದಲ್ಲಿ ಜಾತ್ರೆಗಳನ್ನು ಕೂಡ ಸಂಘಟಿಸಲಾಗುವುದು.

ಮಾತಾ ಸೀತಲಾದೇವಿ ಶಕ್ತಿ ಪೀಠವು ಇಲ್ಲಿನ ಇನ್ನೊಂದು ಯಾತ್ರಾಸ್ಥಳ. ಇದು ಸುಮಾರು  2200 ವರ್ಷಗಳಷ್ಟು ಪ್ರಾಚೀನವಾದದ್ದು. ಇದು ರೈಲು ನಿಲ್ದಾಣದಿಂದ ಕೇವಲ 1.5ಕಿ.ಮೀ ದೂರದಲ್ಲಿದೆ.

ರಜ್ನಾಂದಗಾವ್ ಪ್ರಸಿದ್ಧವಾಗಿದೆ

ರಜ್ನಾಂದಗಾವ್ ಹವಾಮಾನ

ಉತ್ತಮ ಸಮಯ ರಜ್ನಾಂದಗಾವ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರಜ್ನಾಂದಗಾವ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ - 6 ( ಗ್ರೇಟ್ ಈಸ್ಟರ್ನ್ ರೋಡ್ ) ಯು ರಾಜ್ನಾಂದಗಾವ್ ಮಾರ್ಗವಾಗಿ ಹೋಗುತ್ತಿದ್ದು, ಇದು ಅನೇಕ ನಗರ ಹಾಗು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಾಜ್ನಾಂದಗಾವ್ ಆಗ್ನೇಯ ರೈಲ್ವೆಯ ಮುಂಬೈ-ಹೌರಾ ಮಾರ್ಗದಲ್ಲಿ ಬರುತ್ತದೆ. ಸ್ಥಳೀಯ ರೈಲುಗಳು ರಾಜ್ನಾಂದಗಾವ್ ದಿಂದ ದೊಂಗರ್ಗಹ, ನಾಗಪುರ್ ಮತ್ತು ರಾಯಪುರ್ ಗಳಿಗೆ ಸಂಪರ್ಕ ಕಲ್ಪಿಸುತ್ತವೆ ಇಲ್ಲಿಂದ ಮುಂಬೈ, ಕೋಲ್ಕತ್ತ, ದೆಹಲಿಗಳಿಗೆ ಎಕ್ಸಪ್ರೆಸ್ ರೈಲುಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    80 ಕಿ.ಮೀ ದೂರದ ರಾಯಪುರ್ ವಾಯುನೆಲೆಯೇ ರಾಜ್ನಾಂದಗಾವ್ ಗೆ ಹತ್ತಿರದ ವಾಯುನೆಲೆಯಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed