ಸೌರಾಷ್ಟ್ರ ವ್ಯಾಪ್ತಿಯಲ್ಲಿರುವ ಈ ಪುರಾತನ ಮ್ಯೂಸಿಯಂ ಗುಜರಾತ್ ನಲ್ಲಿ ನೋಡಲೇಬೇಕಾದ ಪ್ರವಾಸಿ ತಾಣ. ಇದು ಹಸಿರು ಪರಿಸರವನ್ನು ಹೊಂದಿದೆ ಮತ್ತು ಕಲಾಕೃತಿ ಹಾಗೂ ವರ್ಣಚಿತ್ರಗಳ ಸಂಗ್ರಹಗಳು ಇಲ್ಲಿವೆ. ಜುಬ್ಲಿ ಗಾರ್ಡನ್ ನಲ್ಲಿರುವ ಕ್ವೀನ್ ವಿಕ್ಟೋರಿಯಾ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಕಟ್ಟಡದಲ್ಲಿರುವ ಇದಕ್ಕೆ 1881ರಿಂದ 1889ರ ತನಕ ಕಥಿವಾರ್ ಏಜೆನ್ಸಿಯ ರಾಜಕೀಯ ಏಜೆಂಟ್ ಹುದ್ದೆ ನಿರ್ವಹಿಸಿದ ಕರ್ನಲ್ ಜಾನ್ ವಾಟ್ಸನ್ ಹೆಸರನ್ನಿಡಲಾಗಿದೆ.
ವಾಟ್ಸನ್ ವೈಯಕ್ತಿಕ ಸಂಗ್ರಹಗಳೊಂದಿಗೆ ಪ್ರಾಚೀನ ಇತಿಹಾಸ ಮತ್ತು ಮೊಹೆಂಜೊದಾರೊ ಕಾಲದ ಕಲಾಕೃತಿಗಳು ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರು ಉಪಯೋಗಿಸುತ್ತಿದ್ದಂತಹ ಬಟ್ಟೆಬರೆ ಮತ್ತು ಆಭರಣಗಳು ಇಲ್ಲಿವೆ. ಮ್ಯೂಸಿಯಂ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ತನಕ ಪ್ರತೀದಿನ ತೆರೆದಿರುತ್ತದೆ. ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಇದು ಮುಚ್ಚಿರುತ್ತದೆ.