ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿಯಲ್ಲಿರುವ ಪೂರ್ವ ಗೋದಾವರಿ ಜಿಲ್ಲಿಯಲ್ಲಿರುವ ಕೋನಸೀಮಾ ಪ್ರದೇಶ ರಾಜಮಂಡ್ರಿಯ ಇನ್ನೊಂದು ರಮಣೀಯ ಪ್ರವಾಸಿ ತಾಣ. ಇಲ್ಲಿನ ಸುಂದರ ಪ್ರಾಕೃತಿಕ ದೃಶ್ಯಗಳು ಕಣ್ಮನ ತಣಿಸುವಂತಿದೆ. ವಸಿಷ್ಠ, ಗೌತಮಿ ಮತ್ತು ಕೋನಸೀಮಾ ನದಿಗಳು, ಡೆಲ್ಟಾ ಆಣೆಕಟ್ಟಿನ ಹಿನ್ನೀರು ಇಲ್ಲಿನ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ವಿಫುಲ ಅವಕಾಶವಿದೆ. ಪರಿಸರ ಪ್ರವಾಸೋದ್ಯಮಕ್ಕೆ ಇಲ್ಲಿ ವಿಫುಲ ಅವಕಾಶಗಳಿದ್ದು, ರಾಜಮಂಡ್ರಿಯ ಇತರ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿನ ವಾತಾವರಣ ಹಿತಕರವಾಗಿದೆ. ದೈನಂದಿನ ಜೀವನಕ್ಕೆ ಮತ್ತು ಒತ್ತಡದಿಂದ ಬೇಸತ್ತ ಮನಸ್ಸಿಗೆ ಹೊಸ ಚೈತನ್ಯವನ್ನು ಈ ಪ್ರದೇಶ ತುಂಬುತ್ತದೆ ಅಂದರೆ ಅತಿಶಯೋಕ್ತಿ ಅಲ್ಲ.