ಶಾಪಿಂಗ್ ಪ್ರಿಯರಿಗೆ ರಾಯಪುರ್ ನಗರವು ಹಲವಾರು ಕೇಂದ್ರಗಳಿವೆ. ಇಲ್ಲಿನ ಬೀದಿಗಳು ಅಂಗಡಿಗಳಿಂದ ತುಂಬಿಹೋಗಿವೆ. ಕರಕುಶಲ ವಸ್ತುಗಳು, ಬಿದಿರು ಮತ್ತು ಮರದ ಕೆತ್ತನೆಗಳು, ಬಟ್ಟೆ ಮತ್ತು ಆಭರಣ ಮುಂತಾದ ವಸ್ತುಗಳನ್ನು ಮಾರಾಟ ಹಲವಾರು ಅಂಗಡಿಗಳಿವೆ.
ನಿಮ್ಮ ಪ್ರೀತಿಪಾತ್ರರಿಗೆ ಸೀರೆ ಉಡುಗೊರೆ ನೀಡಲು ಬಯಸುವಿರಾದರೆ ರಾಯಪುರ್ ನಲ್ಲಿನ ಕೈಮಗ್ಗ ಸೀರೆಗಳು ಲಭ್ಯವಿದೆ. ತೊಗಿತಾ ಕೊಸಾ ಕೈಮಗ್ಗ ಮತ್ತು ಬರ್ಲೊತಾ ಎಂಟರ್ ಪ್ರೈಸಸ್ ನಲ್ಲಿ ಕೈಮಗ್ಗದ ಒಳ್ಳೆಯ ಸೀರೆಗಳು ಸಿಗುತ್ತವೆ. ಶಾಬರಿ ಛತ್ತೀಸ್ ಗಢ್ ರಾಜ್ಯ ಎಂಪೋರಿಯಂನಲ್ಲಿ ಹಲವಾರು ವಿಧದ ಕರಕುಶಲ ವಸ್ತುಗಳು ಲಭ್ಯವಿದೆ.
ನಗರದಲ್ಲಿರುವ ಇತರ ಕೆಲವು ಪ್ರಮುಖ ಶಾಪಿಂಗ್ ಕೇಂದ್ರಗಳೆಂದರೆ ಮಾಗ್ನೆಟೊ-ದ ಮಾಲ್, ಕಲರ್ ಮಾಲ್, ಸಿಟಿ ಮಾಲ್ 36, ಆರ್ ಕೆ ಮಾಲ್, ಛತ್ತೀಸ್ ಗಢ್ ನಗರ ಸೆಂಟ್ರಲ್ ಮಾಲ್, ಮಹಾಕೊಶಲ್ ಕಲಾ ಗ್ಯಾಲರಿ, ಅಂಬುಜಾ ಸಿಟಿ ಸೆಂಟರ್ ಮಾಲ್ ಮತ್ತು ಟ್ರೆಸರ್ ಐಲೆಂಡ್.