Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಟ್ಟಪರ್ತಿ » ಹವಾಮಾನ

ಪುಟ್ಟಪರ್ತಿ ಹವಾಮಾನ

ಪುಟ್ಟಪರ್ತಿಯನ್ನು ಭೇಟಿಯಾಗಲು ಸೆಪ್ಟೆಂಬರ್ ನಿಂದ ಫೆಬ್ರುವರಿ ಸೂಕ್ತವಾದ ಸಮಯ. ವಾತಾವರಣ ಈ ಸಮಯದಲ್ಲಿ ಹಿತಕರವಾಗಿರುತ್ತದೆ ಮತ್ತು ಉಷ್ಣತೆ ಕನಿಷ್ಟ 14 ಡಿಗ್ರಿಯಿಂದ ಗರಿಷ್ಠ 30 ಡಿಗ್ರಯವರೆಗೆ ಇರುತ್ತದೆ. ಇಲ್ಲಿನ ಸ್ಥಳಗಳನ್ನು ನೋಡಲು, ಹೊರಹೋಗುವುದಕ್ಕೆ ಮತ್ತು ಪ್ರವಾಸಿ ಚಟುವಟಿಕೆಗಳಿಗೆ ಇದು ಪ್ರಶಸ್ತ ಕಾಲ.

ಬೇಸಿಗೆಗಾಲ

ಮಾರ್ಚ್ ಮತ್ತು ಜೂನ್ ನಡುವಿನ ಬೇಸಿಗೆ ಅತಿಯಾದ ಉಷ್ಣತೆಯನ್ನು ಹೊಂದಿರುತ್ತವೆ ಮತ್ತು ಅಹಿತಕರವಾಗಿರುತ್ತವೆ. ಇಲ್ಲಿನ ಉಷ್ಣತೆ ಗರಿಷ್ಠ 41 ಡಿಗ್ರಿಯಿಂದ ಕನಿಷ್ಟ 23 ಡಿಗ್ರಿಯಷ್ಟಿರುತ್ತದೆ. ಈ ವಾತಾವರಣದಲ್ಲಿ ಪ್ರವಾಸಿ ಚಟುವಟಿಕೆಗಳು ಕಷ್ಟ. ಈ ಸಮಯದಲ್ಲಿ ಪುಟ್ಟಪರ್ತಿಯನ್ನು ಭೆಟಿಯಾಗಲು ಸಲೆಹ ನೀಡುವುದು ಉತ್ತಮವಲ್ಲ.

ಮಳೆಗಾಲ

ಪುಟ್ಟಪರ್ತಿ ಬಿರುಸಾದ ಮಳೆಯನ್ನು ಕಾಣುವುದು ಜುಲೈ ಮತ್ತು ಅಕ್ಟೋಬರ್ ನಡುವೆ. ಮಾನ್ಸೂನ್ ತಂಗಾಳಿಯನ್ನು ಹೊತ್ತು ತರುವುದರಿಂದಾಗಿ ವಾತಾವರಣ ತಂಪಾಗಿರುತ್ತದೆ ಮತ್ತು ಹಿತಕರವಾಗಿರುತ್ತದೆ. ಕಿರಿದಾದ ಭೇಟಿಗೆ ಇದು ಸರಿಯಾದ ಸಮಯ.

ಚಳಿಗಾಲ

ಚಳಿಗಾಲ ಪುಟ್ಟಪರ್ತಿಯನ್ನು ಭೇಟಿ ಮಾಡಲು ಸೂಕ್ತ. ವಾತಾವರಣ ಈ ಸಮಯದಲ್ಲಿ ಹಿತಕರವಾಗಿರುತ್ತದೆ ಮತ್ತು ಉಷ್ಣತೆ ಕನಿಷ್ಟ 14 ಡಿಗ್ರಿಯಿಂದ ಗರಿಷ್ಠ 30 ಡಿಗ್ರಯವರೆಗೆ ಇರುತ್ತದೆ. ಚಳಿಗಾಲ ನವೆಂಬರ್ ನಿಂದ ಫೇಬ್ರವರಿಯವರೆಗೆ ಇರುತ್ತದೆ.