ಪುಷ್ಕರ್ ಉತ್ಸವದ ಸಮಯದಲ್ಲಿ, ಪುಷ್ಕರ್ ಬಜಾರ್ ವು ರಾಜಸ್ಥಾನ ಸಂಸ್ಕೃತಿಯ ಸಾರಾಂಶವನ್ನೇ ಪ್ರದರ್ಶಿಸುತ್ತದೆ ಎಂದರೆ ತಪ್ಪಾಗಲಾರದು. ರಾಜಸ್ಥಾನಿ ಶೈಲಿಯ ಬೊಂಬೆಗಳು, ಎಂಬ್ರಾಯ್ಡರಿ ಮಾಡಿದ ಬಟ್ಟೆಗಳು, ಬಳೆಗಳು, ಪಾತ್ರೆ-ಪಗಡೆಗಳು, ಇನ್ನಿತರ ಹಲವಾರು ಕಲಾಸಾಮಗ್ರಿಗಳು ಈ ಬಜಾರಿನಲ್ಲಿ ದೊರೆಯುತ್ತವೆ. ಇಲ್ಲಿ ಖರಿದಿಗೆಂದು ಇಡಲಾಗಿರುವ ಅನೇಕ ಸಾಂಪ್ರದಾಯಿಕ ವಸ್ತುಗಳನ್ನು ಬಾಮರ್ ಹಾಗು ರಾಜಸ್ಥಾನದ ಇತರೆ ಭಾಗಗಳಿಂದ ತರಲಾಗಿರುತ್ತದೆ.