ಪುಷ್ಕರ್ ನ ಆಪ್ತೈಶ್ವರ ದೇವಸ್ಥಾನವು ಪ್ರಸಿದ್ಧವಾದ ಮೂರು ಪವಿತ್ರ ದೇವಸ್ಥಾನಗಳಲ್ಲಿ ಒಂದಾಗಿದ್ದು, ಸುಮಾರು 10 ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಹಿಂದು ಧರ್ಮದ ದೇವರಾದ ಭಗವಾನ್ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ಸುಂದರವಾದ ಶಿವಲಿಂಗವಿರುವುದನ್ನು ಕಾಣಬಹುದು. ಮುಘಲ್ ದೊರೆ ಔರಂಗಜೇಬ್ ನಿಂದ ಹಾನಿಗೊಳಗಾದ ಹಲವಾರು ದೇವಾಲಯಗಳಲ್ಲಿ ಇದು ಒಂದಾಗಿದ್ದು, ನಂತರ ಇದನ್ನು ಮತ್ತೆ ಕಟ್ಟಲಾಯಿತು.