ಟ್ರೈಬಲ್ ಮ್ಯೂಸಿಯಮ್ ಪುಣೆ ಜಿಲ್ಲೆಯಲ್ಲಿರುವ ತನ್ನದೇ ಆದ ಒಂದು ವಿಶೀಷ್ಟ ಶೈಲಿಯಲ್ಲಿರುವ ಮ್ಯೂಸಿಯಂ ಆಗಿದೆ. ಕೋರೆಗಾಂವ್ ರಸ್ತೆಯಲ್ಲಿರುವ ಈ ಮ್ಯೂಸಿಯಂ ಮಹಾರಾಷ್ಟ್ರದಲ್ಲಿರುವ ಬುಡಕಟ್ಟು ಜನಾಂಗದ ಜೀವನ ಮತ್ತು ಸಂಸ್ಕೃತಿಯ್ನನು ಬಿಂಬಿಸುವಂತಿದೆ. ಬುಡಕಟ್ಟು ಸಂಶೋಧನಾ ಮತ್ತು ತರಬೇತಿ ಸಂಸ್ಥೆಯು ಈ ಮ್ಯೂಸಿಯಮ್ ಅನ್ನು ನಿರ್ವಹಿಸುತ್ತಿದೆ.
ವಿವಿಧ ಕಲಾಕೃತಿಗಳು ಮತ್ತು ಆಯುಧಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮರಾಯಿ, ದಾಂತೇಶ್ವರಿ, ಬಹಿರಾಮ್ ಮತ್ತು ವಾಘ್ಡೆಯೋ ಬುಡಕಟ್ಟುಗಳನ್ನು ಇಲ್ಲಿ ಬಿಂಬಿಸಲಾಗಿದೆ. ಬುಡಕಟ್ಟು ಜನಾಂಗದ ಕರಕುಶಲ ವಸ್ತು ಮತ್ತು ಇತರ ವಸ್ತುಗಳು ತಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಬುಡಕಟ್ಟು ಜನಾಂಗದ ದಾಖಲಾತಿಗಳು ಮತ್ತು ಅವರ ಜೀವನ ಹಾಗೂ ಸಂಸ್ಕೃತಿಯ ಬಗೆಗಿನ ಒಳವುಗಳನ್ನು ನೀಡುತ್ತದೆ.
ಭಾನುವಾರದ ಹೊರತಾಗಿ ಮ್ಯೂಸಿಯಂ ಎಲ್ಲಾ ದಿನಗಳಲ್ಲೂ ಬೆಳಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ತೆರೆದಿರುತ್ತದೆ.