ಸುರಾನ್ಕೋಟೆ ಒಂದು ಚಿಕ್ಕ ಹಳ್ಳಿ. ಪೂಂಚ್ನಿಂದ 27 ಕಿ.ಮೀ. ದೂರದಲ್ಲಿದೆ. ಸುರಾನ್ ನದಿ ದಂಡೆಯ ಮೇಲೆ ಈ ಹಳ್ಳಿ ಇದೆ. ಇದು ಸುರಾನ್ ಕಣಿವೆ ಪ್ರದೇಶ ಅಂತಲೂ ಕರೆಸಿಕೊಳ್ಳುತ್ತದೆ. ಈ ಕಣಿವೆ ಪ್ರದೇಶ ಹಿಮದಿಂದ ಆವೃತ್ತವಾದ ಬೇಹತ್ ಬೆಟ್ಟದ ಸಾಲನ್ನು ಒಳಗೊಂಡಿದೆ. ಇವು 'ಪೂಂಚ್ನ ಪಹಾಲ್ಗಮ್' ಅಂತ ಜನಪ್ರಿಯವಾಗಿವೆ. ಇಲ್ಲಿರುವ ಇದೆ ಹೆಸರಿನ ಕೋಟೆಯು ಸುಮಾರು 1036 ರಲ್ಲಿ ನಿರ್ಮಿಸಿದ್ದು ಎಂದು ನಂಬಲಾಗುತ್ತದೆ. ಇದರಿಂದಾಗಿಯೇ ಈ ಹಳ್ಳಿಗೆ ಸುರಾನ್ಕೋಟೆ ಎಂಬ ಹೆಸರು ಕೂಡ ಬಂದಿದೆ. ನದಿ ಹಾಗೂ ಕೋಟೆ ಎರಡೂ ಹೆಸರುಗಳು ಬೆರೆತು, ಊರಿನ ಹೆಸರಾಗಿದೆ.