Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊನ್ಮುಡಿ » ಹವಾಮಾನ

ಪೊನ್ಮುಡಿ ಹವಾಮಾನ

ಸದಾ ಉತ್ತಮ ವಾತಾವರಣ ಹೊಂದಿರುವ ಗುಣ ಪೊನ್ಮುಡಿಗೆ ಇದೆ. ಆದರೂ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್‌ನಿಂದ ಮಾರ್ಚ್ ಸಮಯ. ಬೇಸಿಗೆಯಲ್ಲಿ ಈ ತಾಣಕ್ಕೆ ಬರುವುದು ಉತ್ತಮ ವಿಧಾನ. ಮಳೆಗಾಲ ನಿಂತ ತಕ್ಷಣ ಬರುವುದು ಕೂಡ ಉತ್ತಮ. ಆ ಸಂದರ್ಭದಲ್ಲಿ ಸಾಕಷ್ಟು ಹಸಿರು ಕಂಗೊಳಿಸುತ್ತಿರುತ್ತದೆ. 

ಬೇಸಿಗೆಗಾಲ

ಮಾರ್ಚ್ ಕೊನೆಯಿಂದ ಆರಂಭವಾಗುವ ಬೇಸಿಗೆ ಮೇ ಅಂತ್ಯದ ವರೆಗೂ ಇರುತ್ತದೆ. ಅತಿಯಾದ ಬಿಸಿಲು ಈ ಸಂದರ್ಭದಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಭೇಟಿ ನೀಡುವುದು ಉತ್ತಮ. ಇಡೀ ಪೊನ್ಮುಡಿಯಲ್ಲಿ ತಾಪಮಾನ 21 ಡಿಗ್ರಿ ಸೆಲ್ಶಿಯಸ್‌ನಿಂದ 34 ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ. ಮೇ ತಿಂಗಳಲ್ಲಿ ಇಲ್ಲಿ ಕೊಂಚ ಬೇಸಿಗೆ ವಾತಾವರಣ ಇರುತ್ತದೆ.

ಮಳೆಗಾಲ

ಜೂನ್‌ ಆರಂಭಕ್ಕೆ ಮೊದಲೇ ಮಳೆಗಾಲ ಶುರುವಾಗುತ್ತದೆ. ಸೆಪ್ಟೆಂಬರ್‌ ಆರಂಭದವರೆಗೂ ಇಲ್ಲಿ ಸಾಕಷ್ಟು ಮಳೆ ಆಗುತ್ತದೆ. ಹಗಲು ಕೊಂಚ ಬೆಳಕಿರುತ್ತದೆ. ರಾತ್ರಿ ಅತಿಯಾದ ಚಳಿ ಇರುತ್ತದೆ. ವಿಪರೀತ ಮಳೆ ಬೀಳುವ ಸಂದರ್ಭದಲ್ಲಿ ಇಲ್ಲಿ ಬರುವುದು ಸರಿಯಲ್ಲ. ರಸ್ತೆ ಸ್ಥಿತಿ ಅಷ್ಟು ಉತ್ತಮವಾಗಿರುವುದಿಲ್ಲ. ಮಳೆಗಾಲದಲ್ಲಿ ಈ ತಾಣಕ್ಕೆ ಸಂದರ್ಶಿಸುವುದು ಸೂಕ್ತ ಅಲ್ಲ.

ಚಳಿಗಾಲ

ನವೆಂಬರ್‌ನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿವರೆಗೂ ಇರುತ್ತದೆ. ಇತರೆ ಪರ್ವತ ತಾಣಗಳಂತೆ ಇಲ್ಲಿಯೂ ಚಳಿಗಾಲದಲ್ಲಿ ಉಷ್ಣಾಂಶ ಪ್ರಮಾಣ ಗಣನೀಯವಾಗಿ ಇಳಿಯುತ್ತದೆ. ವರ್ಷದಲ್ಲೇ ಡಿಸೆಂಬರ್‌ ತಿಂಗಳು ಅತಿ ಚಳಿಯಾದ ಮಾಸವಾಗಿರುತ್ತದೆ. ಈ ಸಮಯದಲ್ಲಿ ಬರುವವರಿಗೆ ನೀಡುವ ಸಲಹೆ ಎಂದರೆ ಚಳಿಗಾಲದ ಉಡುಗೆಯನ್ನು ತಂದುಕೊಳ್ಳುವುದು ಸೂಕ್ತ.