ಸ್ಕೀಯಿಂಗ್, ಪಿಥೋರಗಡ್ ಗೆ ಭೇಟಿ ನೀಡುವ ಪ್ರವಾಸಿಗರ ಫೆವರಿಟ್ ಆಟ/ಚಟುವಟಿಕೆ. ಬೆಟುಲಿ ಧಾರ್ ಪಿಥೋರಗಡ್ ನ ಅತ್ಯಂತ ಪ್ರಸಿದ್ಧ ಸ್ಕೀ ಸ್ಲೋಪ್ ಆಗಿದೆ. ಪ್ರವಾಸಿಗರು ಚಿಪಲ್ ಕೋಟ್ ನಲ್ಲಿ ಸ್ಕೀಯಿಂಗ್ ನ ಅನುಭವ ಪಡೆಯಬಹುದು. ಇದು ಸಮುದ್ರ ಮಟ್ಟದಿಂದ ಸುಮಾರು 3090 ಮೀ ಎತ್ತರದಲ್ಲಿದೆ. ಇದರ ಜೊತೆಗೆ ಇಲ್ಲಿರುವ ಖಾಲಿಯಾ ಟಾಪ್ ಕೂಡ ಒಂದು ಸುಂದರವಾದ ಆಲ್ಪೈನ್ ಹುಲ್ಲುಗಾವಲಾಗಿದ್ದು, ಜೊತೆಗೆ ಸ್ಕೀಯಿಂಗ್ ತಾಣ ಕೂಡ ಹೌದು.