ಸಮುದ್ರ ಮಟ್ಟದಿಂದ 2734 ಮೀ ಎತ್ತರದಲ್ಲಿರುವ ನಾರಾಯಣ ಆಶ್ರಮ ಎಲ್ಲಾ ಪ್ರವಾಸಿಗರ ಭೇಟಿಯ ಪಟ್ಟಿಯಲ್ಲಿರುವ ಇನ್ನೊಂದು ತಾಣ. ಇದನ್ನು ನಾರಾಯಣ ಸ್ವಾಮಿ 1936 ರಲ್ಲಿ ನಿರ್ಮಾಣ ಮಾಡಿದ್ದರು. ಇದು ಪಿಥೋರಗಡ್ ದಿಂದ 44 ಕಿ.ಮೀ ದೂರದಲ್ಲಿದೆ. ಈ ಆಶ್ರಮ ತನ್ನ ಭಕ್ತರಿಗೆ ಹಲವಾರು ಬೌದ್ಧಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಈ ಆಶ್ರಮದಲ್ಲಿ 40 ಮಂದಿಗೆ ವಸತಿ ವ್ಯವಸ್ಥೆಯೂ ಇದೆ. ಆದರೆ ಇದು ಚಳಿಗಾಲದಲ್ಲಿ ಹೆಚ್ಚಿನ ಹಿಮಪಾತದ ಕಾರಣದಿಂದ ಮುಚ್ಚಲ್ಪಟ್ಟಿರುತ್ತದೆ.