ಕಪಿಲೇಶ್ವರ ಮಹಾದೇವ ದೇವಾಲಯ, ಸೋರ್ ಕಣಿವೆಯ ಒಂದು ಪ್ರಸಿದ್ಧ ದೇವಸ್ಥಾನವಾಗಿದೆ. ಇದು ತಕೌರಾ ಮತ್ತು ತಕಾರಿ ಹಳ್ಳಿಗೆಳಿಗೆ ಬಹಳ ಸಮೀಪದಲ್ಲಿದೆ. ಇದು ಗುಹೆಯ ಒಳಗೆ ಹತ್ತು ಮೀ ಒಳಗಿದೆ ಹಾಗೂ ಇಲ್ಲಿ ಶಿವದೇವರನ್ನು ಪೂಜಿಸಲಾಗುತ್ತದೆ. ಇಲ್ಲಿನ ನಂಬಿಕೆಗಳ ಪ್ರಕಾರ, ಸಂತ ಕಪಿಲ ಮಹರ್ಷಿಯು ಇಲ್ಲಿಯೇ ತಪಸ್ಸನ್ನಾಚರಿಸಿದ್ದರು. ಇದು ನಗರದಿಂದ ಕೇವಲ 3 ಕಿ.ಮೀ ದೂರದಲ್ಲಿದ್ದು ಹಿಮಾಲಯ ಪರ್ವತದ ಸುಂದರವಾದ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ನಗರಕ್ಕೆ ಸಮೀಪದಲ್ಲಿ ಇನ್ನೊಂದು ಶಿವನ ಗುಹಾ ದೇವಾಲಯ ಇದೆ.