ಪುರಾಣದಲ್ಲ ಹೇಳುವ, ಗೋಮತಿ ನದಿ, ಉತ್ತರ ಪ್ರದೇಶದ ಪ್ರಮುಖ ಪಟ್ಟಣಗಳಲ್ಲಿ ಹರಿಯುವ ಉತ್ತರ ಭಾರತದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದು. ಇದನ್ನು ಪಿಲಿಭಿಟ್ ನಲ್ಲಿ ಸಂತ ವಸಿಷ್ಟನ ಮಗಳು ಎಂದು ಕರೆಯಲಾಗುತ್ತದೆ. ಗೋಮತ ತಾಲ್ ಹಿಂದೂಗಳಿಗೆ ಅತ್ಯಂತ ಪವಿತ್ರ ಮತ್ತು ಈ ನೀರಿನಲ್ಲಿ ತೀರ್ಥ ಸ್ನಾನವನ್ನು ಮಾಡಲು ವರ್ಷಪೂರ್ತಿ ಅದರಲ್ಲೂ ವಿಶೇಷವಾಗಿ ಸೂರ್ಯ ಗ್ರಹಣ ಸಮಯದಲ್ಲಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಗೋಮತ ತಾಲ್ ನಲ್ಲಿ ಸ್ನಾನ ಮಾಡುವುದು ಕುರುಕ್ಷೇತ್ರದ ನದಿಯಲ್ಲಿ ಸ್ನಾನ ಮಾಡಿದಷ್ಟೇ ಪವಿತ್ರ ಎಂದು ಹೇಳಲಾಗುತ್ತದೆ.