Search
  • Follow NativePlanet
Share
ಮುಖಪುಟ » ಸ್ಥಳಗಳು» ಪಿಲಿಭಿಟ್

ಪಿಲಿಭಿಟ್ : ಹುಲಿಗಳ ಗಮ್ಯ ಸ್ಥಾನ

34

ಉತ್ತರಪ್ರದೇಶದ ಒಂದು ರಮಣೀಯ ಪಟ್ಟಣ, ಪಿಲಿಭಿಟ್, ರಾಜ್ಯದಲ್ಲಿರುವ ಶ್ರೀಮಂತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಪಟ್ಟಣ ಅತಿ ಹೆಚ್ಚು ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ, ಆದರೆ, ನೇಪಾಳ ಜೊತೆ 54 ಕಿ. ಮೀ ಉದ್ದದ ಗಡಿ ಕೆಲವು ಸಾಮಾಜಿಕ ಭದ್ರತೆ ಸಮಸ್ಯೆಗಳನ್ನು ಒಡ್ಡುತ್ತದೆ. ಪಿಲಿಭಿಟ್ ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ಕೆಲವು ಆಸಕ್ತಿದಾಯಕ ಪುರಾತನ ಐತಿಹಾಸಿಕ ಸ್ಮಾರಕಗಳ ನೆಲೆಯಾಗಿದೆ. ಸುಂದರ ನೈಸರ್ಗಿಕ ಸೆಟ್ಟಿಂಗ್‍ಗಳನ್ನು ಅಥವಾ ದೃಶ್ಯಾವಳಿಗಳನ್ನು ಪ್ರವಾಸಿಗರು ಇಲ್ಲಿ ಆನಂದಿಸಬಹುದು.

ಪಿಲಿಭಿಟ್ ನಲ್ಲಿನ ಮತ್ತು ಸುತ್ತಲಿನ ಪ್ರವಾಸಿ ಸ್ಥಳಗಳು

ಪಿಲಿಭಿಟ್, ಭವ್ಯ ಪ್ರಾಣಿಗಳನ್ನು ಗುರುತಿಸಬಲ್ಲ ಪಿಲಿಭಿಟ್ ಟೈಗರ್ ಮೀಸಲು ಪ್ರದೇಶದ ನೆಲೆಯಾಗಿದೆ. ಇತರೆ ನೈಸರ್ಗಿಕ ಆಕರ್ಷಣೆಗಳೆಂದರೆ ಗೋಮತ ತಾಲ್, ದೇವಹಾ-ಘಾಗಹ ಸಂಗಮ ಮತ್ತು ರಾಜಾ ವೇಣು ಕಾ ತಿಲಾ ಮೊದಲಾದವು. ಇಲ್ಲಿ ಮಹೋಫ್  ಅರಣ್ಯ ವ್ಯಾಪ್ತಿಯಲ್ಲಿ ಚುಕಾ ಬೀಚ್ ಎಂಬ ಬೀಚ್ ಸಹ ಇದೆ. ಕಡಲತೀರದ ಸೂರ್ಯಾಸ್ತದ ಒಂದು ಸಮ್ಮೋಹನಗೊಳಿಸುವ ದೃಶ್ಯವನ್ನು ಇದು ಒದಗಿಸುತ್ತದೆ.

ಸುಮಾರು 450 ವರ್ಷಗಳ ಹಳೆಯ ಗೌರಿ ಶಂಕರ್ ದೇವಸ್ಥಾನ ಸೇರಿದಂತೆ ಪಿಲಿಭಿಟ್ ನಲ್ಲಿ ಅನೇಕ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿವೆ. ಮೌಲ್ಯಯುತವಾದ ಇತರೆ ಸ್ಥಳಗಳೆಂದರೆ, ಛಟವಿ ಪಡ್ಸಾಹಿ (Chhathavi Padshahi) ಗುರುದ್ವಾರ, ದರ್ಗಾ ಹಜರತ್ ಷಾ ಮಹಮ್ಮದ್ ಶೇರ್ ಮಿಯಾ ಕಿ, ಜಾಮಾ ಮಸೀದಿ, ಮೆಥೊಡಿಸ್ಟ್ ಚರ್ಚ್, ಅರ್ಧನಾರೀಶ್ವರ ದೇವಸ್ಥಾನ ಮತ್ತು ಜೈ ಸಂತರಿ ದೇವಿ ದೇವಾಲಯ. ಅದರ ಅಸ್ತಿತ್ವವನ್ನು 15 ನೇ ಶತಮಾನದ್ದೆಂದು ಪತ್ತೆಹಚ್ಚಲಾಗಿರುವ ಹಳೆಯ ಪಿಲಿಭಿಟ್ ಕೂಡ ಇಲ್ಲಿನ ಅತ್ಯಂತ ವರ್ಣರಂಜಿತ ಮತ್ತು ಪ್ರಸಿದ್ಧವಾದ ಸ್ಥಳವಾಗಿದೆ.

ಪಿಲಿಭಿಟ್ ಹವಾಮಾನ

ಉತ್ತರ ಭಾರತದ ಇತರ ನಗರಗಳು ಮತ್ತು ಪಟ್ಟಣಗಳಂತೆ ಪಿಲಿಭಿಟ್ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದ ಋತುವನ್ನು ಅನುಭವಿಸುತ್ತದೆ.

ಪಿಲಿಭಿಟ್ ಭೇಟಿಗೆ ಸೂಕ್ತ ಸಮಯ

ನವೆಂಬರ್ ನಿಂದದ ಏಪ್ರಿಲ್ ವರೆಗಿನ ಅವಧಿ ಪಿಲಿಭಿಟ್ ಭೇಟಿಗೆ ಸೂಕ್ತ ಸಮಯ.  ಹುಲಿ ಮೀಸಲು ಪ್ರದೇಶ ಮತ್ತು ಧಾರ್ಮಿಕ ಸ್ಥಳಗಳು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪಿಲಿಭಿಟ್ ಪ್ರಸಿದ್ಧವಾಗಿದೆ

ಪಿಲಿಭಿಟ್ ಹವಾಮಾನ

ಉತ್ತಮ ಸಮಯ ಪಿಲಿಭಿಟ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಿಲಿಭಿಟ್

  • ರಸ್ತೆಯ ಮೂಲಕ
    ಈ ಪಟ್ಟಣ ಉತ್ತರ ಪ್ರದೇಶದ ನಗರಗಳು ಮತ್ತು ಭಾರತದ ಇತರ ನಗರಗಳಾದ ದೆಹಲಿ, ಲಖನೌ, ಹರಿದ್ವಾರ್, ಹೃಷಿಕೇಶ್, ಕಾನ್ಪುರ್, ರುಪೈಧಿಯಾ, ಆಗ್ರಾ ಮತ್ತು ಬರೇಲಿ ಸೇರಿದಂತೆ ಪ್ರಮುಖ ಪಟ್ಟಣಗಳಿಗೆ ಉತ್ತಮ ಸಂಪರ್ಕ ಕಲ್ಪಿಸಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಲಖನೌ-ಆಗ್ರಾ ಎಕ್ಸ್ ಪ್ರೆಸ್, ಆಗ್ರಾ-ಗೊಂಡಾ ಎಕ್ಸ್ ಪ್ರೆಸ್, ನೈನಿತಾಲ್ ಎಕ್ಸ್ ಪ್ರೆಸ್ ಮತ್ತು ರೋಹಿಲ್ಖಂಡ್ ಎಕ್ಸ್ ಪ್ರೆಸ್ ಮೊದಲಾದ ಎಕ್ಸ್ ಪ್ರೆಸ್ ರೈಲುಗಳು, ಲಖನೌ, ಬರೇಲಿ, ಆಗ್ರಾ ಮತ್ತು ದೆಹಲಿ ನಗರಗಳ ಜೊತೆ ಪಿಲಿಭಿಟ್ ಅನ್ನು ಸಂಪರ್ಕಿಸುತ್ತವೆ. ದೆಹಲಿಯಿಂದ ನೀವು ಹತ್ತಿರದ ಬರೇಲಿ ಜಿಲ್ಲೆಯನ್ನು ತಲುಪಬಹುದು ಮತ್ತು ಅಲ್ಲಿಂದ ಪಿಲಿಭಿಟ್ ತಲುಪಲು ಬಸ್ ಅಥವಾ ಖಾಸಗಿ ಟ್ಯಾಕ್ಸಿ ಲಭ್ಯವಿರುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    There is no air port available in ಪಿಲಿಭಿಟ್
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat