Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆರ್ನೆಮ್ » ಆಕರ್ಷಣೆಗಳು » ಟಿರಾಕೊಲ್ ಕೋಟೆ

ಟಿರಾಕೊಲ್ ಕೋಟೆ, ಪೆರ್ನೆಮ್

3

ಟಿರಾಕೊಲ್ ಕೋಟೆ, ಅಂದಿನ ಸಾವಂತವಾಡಿ ಪ್ರದೇಶದ ಮಹಾರಾಜನಾದ ಖೇಮ್ ಸಾವಂತ ಭೊಸ್ಲೆಯ ಕಾಲದಲ್ಲಿ ನಿರ್ಮಾಣಗೊಂಡು ಅವರ ಆಡಳಿತದಲ್ಲಿತ್ತು. ಸಾವಂತವಾಡಿ ಮಹಾರಾಷ್ಟ್ರ ರಾಜ್ಯದ ದಕ್ಷಿಣ ತುದಿಯ ಕಡೆಯ ಪಟ್ಟಣವಾಗಿದ್ದು, ಇದರ ನಂತರ ಬರುವುದೇ ಗೋವಾ. ನಂತರ 1746 ರಲ್ಲಿ ಪೋರ್ಚುಗೀಸರ ಕೈವಶವಾದ ಈ ಕೋಟೆ ಅನೇಕ ಬಾರಿ ಬದಲಾವಣೆಗಳನ್ನು ಕಂಡಿತು. 1961 ರಲ್ಲೂ, ಗೋವಾವನ್ನು ಭಾರತದಲ್ಲಿ ಒಂದು ಗೂಡಿಸಲು ನಡೆದ ಹೋರಾಟದಲ್ಲಿ, ಸ್ವಾತಂತ್ರ್ಯ ಹೋರಾಟಗಾರರು ಈ ಕೋಟೆಯನ್ನು ಬೇಸ್ ಕ್ಯಾಂಪ್ ಆಗಿ ಬಳಸಿದ್ದರು.

ಪ್ರವಾಸಿ ತಾಣವಾಗಿ ಟಿರಾಕೊಲ್ ಕೋಟೆ

ನಂಪೂರ್ಣವಾಗಿ ವ್ಯಾಪಾರೀಕರಣದಲ್ಲಿ ಮುಳುಗದೆ ಇರುವ ಗೋವಾದ ಕೆಲವೇ ಕೆಲವು ಸ್ಥಳಗಳಲ್ಲಿ ಈ ಕೋಟೆಯೂ ಒಂದಾಗಿದ್ದು ಈಗಲೂ ಕೂಡ ಸ್ವಾಭಾವಿಕ ರೂಪದಲ್ಲೇ ಇದೆ. ಬಹುಮಟ್ಟಿಗೆ ಪಾಶ್ಚಿಮಾತ್ಯರು, ಒಂದು ದಿನದ ಮಟ್ಟಿಗೆ ಕಡಲ ತೀರಗಳಿಂದ ರಜೆ ಬಯಸಿ ಇಲ್ಲಿಗೆ ಪಿಕ್ನಿಕ್ ಗೆಂದು ಬರಲು ಇಷ್ಟಪಡುತ್ತಾರೆ. ಟಿರಾಕೊಲ್ ನದಿಯ ಆಚೆಗಿರುವ ಕ್ವೇರಿಮ್ ಬೀಚ್ ಗೆ ಎದುರ್ಮುಖ ಮಾಡಿ ನಿಂತಿರುವ ಈ ಕೋಟೆಯು, ಗುಡ್ಡದ ತುದಿಯಲ್ಲಿ ನೆಲೆಸಿದೆ. ಇದನ್ನು ಉದ್ದೇಶಪೂರ್ವಕವಾಗಿ ಟಿರಾಕೊಲ್ ನದಿಯು ತನ್ನ ಮೂಲ ಗಾತ್ರದಿಂದ ದೊಡ್ಡದಾಗಿ ಬದಲಾಗುವ ಸ್ಥಳದಲ್ಲಿ ನಿರ್ಮಿಸಲಾಗಿದೆ. ಆದುದರಿಂದ ಇಲ್ಲಿನ ದೃಶ್ಯಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಬೇಸಿಗೆ ಕಾಲವು ಈ ಕೋಟೆಗೆ ಭೇಟಿ ನೀಡಲು ಪ್ರಶಸ್ತವಾಗಿದೆ.ಈ ಕೋಟೆಯು ಉತ್ತರಾಭಿಮುಖದ ದಿಕ್ಕಿನಲ್ಲಿದೆ. ಪಣಜಿ, ವಾಸ್ಕೊ ಮುಂತಾದ ದಕ್ಷಿಣ ಗೋವಾದ ಹಲವಾರು ಭಾಗಗಳಲ್ಲಿರುವ ಪ್ರವಾಸಿಗರಿಗೆ ಈ ಕೋಟೆಯು ದೂರವಾಗಿರುವುದರಿಂದ ಕ್ಯಾಬ್ ಗಳ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ಇನ್ನು ಕ್ಯಾಂಡೋಲಿಮ್, ಬಾಗ, ಕಲಂಗುಟ್ ಮತ್ತು ವಾಗಾತೋರ್ ಮುಂತಾದ ಭಾಗಗಳಲ್ಲಿರುವ ಪ್ರವಾಸಿಗರಿಗೆ ಇದು ಹತ್ತಿರವಾಗಿರುವುದರಿಂದ ಬೈಕ್ ಅಥವಾ ಕ್ಯಾಬ್ ಸವಾರಿಯು ಸುಲಭವಾಗಿ ತಲುಪಿಸುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat