Search
  • Follow NativePlanet
Share
ಮುಖಪುಟ » ಸ್ಥಳಗಳು» ಪೆರ್ನೆಮ್

ಪೆರ್ನೆಮ್ : ಒಂದು ನೈಸರ್ಗಿಕ ಸಹಜ ತಾಣ

11

ಮಹಾರಾಷ್ಟ್ರ ಮತ್ತು ಗೋವಾದ ಸರಹದ್ದಿನಲ್ಲಿ ಬರುವ ಪರ್ನೆಮ್ ಪಟ್ಟಣವು ಹೆದ್ದಾರಿಯಿಂದ ಕೇವಲ ಮಾರಳತೆ ದೂರದಲ್ಲಿದೆ. ಏಕಾಂತತೆಯನ್ನು ಹೊಂದಿರುವ ಈ ಪಟ್ಟಣವು ಕಡಲ ತೀರಗಳಲ್ಲಿ ದಿನವನ್ನು ಕಳೆಯಬಯಸದ ಪ್ರವಾಸಿಗರಿಗೆ ತಕ್ಕುದಾಗಿದೆ. ಇಲ್ಲಿ ಹರಿದಿರುವ ಚಪೋರಾ ಮತ್ತು ಟಿರಾಕೊಲ್ ನದಿಗಳು ನೋಡುಗರಿಗೆ ಸೊಗಸಾದ ದೃಶ್ಯಗಳನ್ನು ಒದಗಿಸುತ್ತವೆ. ಒಟ್ಟಾರೆಯಾಗಿ ಈ ಪಟ್ಟಣವು ಕೆಲವು ವರ್ಷಗಳ ಹಿಂದಿನ ಗೋವಾದ ನೈಜ ಚಿತ್ರಣವನ್ನು ಪ್ರವಾಸಿಗರ ಮುಂದೆ ತೆರೆದಿಡುತ್ತದೆ.ಪರ್ನೆಮ್ ಪಟ್ಟಣವು ಮುಂಬೈ ಅಥವಾ ಪುಣೆಯಿಂದ ಬರುವ ಪ್ರವಾಸಿಗರಿಗೆ ಒಂದು ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು. ಇಲ್ಲಿ ನೋಡಬಹುದಾದ ಎರಡು ಸ್ಥಳಗಳೆಂದರೆ ಶ್ರೀ ಭಗವತಿ ದೇವಸ್ಥಾನ ಮತ್ತು ದೇಶಪ್ರಭು ಹೌಸ್. ಪಾಶ್ಚಿಮಾತ್ಯರು ಈ ಸ್ಥಳವನ್ನು ಇಷ್ಟಪಡುತ್ತಾರೆ.

ಇನ್ನು, ದೇಶಪ್ರಭು ಹೌಸ್..ಇದೊಂದು ದೊಡ್ಡ ಬಂಗಲೆಯಾಗಿದ್ದು ಜಗತ್ತಿನಲ್ಲಿರುವ ಕೇವಲ ಒಬ್ಬ ಹಿಂದು 'ವಿಸ್ಕೌಂಟ್' (ಯುರೋಪಿಯನ್ ಸಮುದಾಯದಲ್ಲಿ ದರ್ಜೆ ಹಾಗು ಗೌರವ ಸೂಚಕ)ರ ಮನೆಯಾಗಿದೆ.ಭಗವತಿ ದೇವಸ್ಥಾನವು ಸೈನ್ಯದ ರೂಪದಲ್ಲಿ ಆನೆಗಳ ಮೂರ್ತಿಗಳನ್ನು ಹೊಂದಿದ್ದು ನೋಡಲು ಸೊಗಸಾಗಿದೆ.

ಪರ್ನೆಮ್ ಗೆ ತಲುಪುವುದು ಬಹಳ ಸರಳವಾಗಿದೆ. ನೀವೇನಾದರು ಉತ್ತರ ದಿಕ್ಕಿನಿಂದ ಗೋವಾ ರಾಜ್ಯಕ್ಕೆ ಪ್ರವೆಶಿಸಿದರೆ, ನಿಮಗೆದುರಾಗುವ ಮೊದಲ ಸ್ಥಳಗಳಲ್ಲಿ ಇದು ಒಂದಾಗಿದೆ. ಇದು ಪಣಜಿಗೆ 25 ಕ್ಕಿಂತಲೂ ಸ್ವಲ್ಪ ಅಧಿಕ ಕಿ.ಮೀ ದೂರದಲ್ಲಿದೆ. ಕ್ಯಾಬ್ ಗಳು ಲಭ್ಯವಿದ್ದರೂ ಸಹ ಸ್ವಂತ ಅಥವಾ ಬಾಡಿಗೆ ವಾಹನಗಳ ಮೂಲಕ ಹೋಗುವುದು ಉತ್ತಮ.

ಪೆರ್ನೆಮ್ ಪ್ರಸಿದ್ಧವಾಗಿದೆ

ಪೆರ್ನೆಮ್ ಹವಾಮಾನ

ಉತ್ತಮ ಸಮಯ ಪೆರ್ನೆಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪೆರ್ನೆಮ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri