Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಂಚ್ » ಹವಾಮಾನ

ಪೆಂಚ್ ಹವಾಮಾನ

ಫೆಬ್ರುವರಿಯಿಂದ ಏಪ್ರಿಲ್ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಪ್ರಶಸ್ತವಾದ ಕಾಲ. ಈ ಸಂದರ್ಭದಲ್ಲಿ ತಾಪಮಾನವು ಹಿತಕರ ಮತ್ತು ಅನುಕೂಲಕರವಾಗಿರುತ್ತದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಜುಲೈನಿಂದ ಸೆಪ್ಟಂಬರ್ ವರೆಗಿನ ಅವಧಿಯಲ್ಲಿ ಈ ರಾಷ್ಟ್ರೀಯ ಉದ್ಯಾನವನವು ಮುಚ್ಚಲ್ಪಟ್ಟಿರುತ್ತದೆ.

ಬೇಸಿಗೆಗಾಲ

ಬೇಸಿಗೆಯ ಅವಧಿ: ಏಪ್ರಿಲ್ ನಿಂದ ಜೂನ್ ವರೆಗೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ದಾಖಲಾಗುವ ತಾಪಮಾನ ಕನಿಷ್ಠ 26 ಡಿಗ್ರಿಯಿಂದ ಗರಿಷ್ಠ 42 ಡಿಗ್ರಿ. ಒಮ್ಮೊಮ್ಮೆ 45 ಡಿಗ್ರಿ ಸೆಲ್ಶಿಯಸ್‍ಗೂ ತಾಪಮಾನ ತಲುಪುವುದುಂಟು. ಇಲ್ಲಿಗೆ ಭೇಟಿ ನೀಡಲು ಇದು ಯೋಗ್ಯವಾದ ಸಮಯವಲ್ಲ.

ಮಳೆಗಾಲ

ಮಳೆಗಾಲದ ಅವಧಿ: ಜುಲೈ ನಿಂದ ಸೆಪ್ಟಂಬರ್. ಈ ಸಂದರ್ಭದಲ್ಲಿ ಪ್ರದೇಶವು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಅತ್ಯಾದ ಮಳೆಯಿಂದಾಗಿ ಅಡೆ ತಡೆಗಳು ಉಂಟಾಗುವುದರಿಂದ ಈ ಸಮಯವು ಕೂಡ ಇಲ್ಲಿಗೆ ಭೇಟಿ ನೀಡಲು ಯೋಗ್ಯವಲ್ಲ.

ಚಳಿಗಾಲ

ಚಳಿಗಾಲದ ಅವಧಿ: ನವಂಬರ್ ನಿಂದ ಫೆಬ್ರುವರಿ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ತಾಪಮಾನವು ಅತಿ ಕನಿಷ್ಠ ಮಟ್ಟ ತಲುಪುತ್ತಿದ್ದು, ಗರಿಷ್ಠ 16 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ.