ಸಂಗಚೋಲಿಂಗ್ ಸನ್ಯಾಸಿಮಠವು ಬೆಟ್ಟದ ತುದಿಯಲ್ಲಿದ್ದು, ಇಲ್ಲಿಗೆ ತಲುಪಲು ಬೆಟ್ಟದ ಮೇಲಿನ ದಟ್ಟವಾದ ಕಾಡುಗಳ ಮೂಲಕ 4 ಕಿ. ಮೀ. ಗಳಷ್ಟು ದೂರ ನಡೆಯಬೇಕು. ಈ ಸನ್ಯಾಸಿಮಠವು 17 ನೆಯ ಶತಮಾನದಲ್ಲಿ ಲಾಸುನ್ ಚೆಂಪೊ ಎಂಬ ಹೆಸರಿನ ಲಾಮಾ ರಿಂದ ನಿರ್ಮಿಸಲ್ಪಟ್ಟಿತು.
ಈ ಸನ್ಯಾಸಿ ಮಠವು ರಹಸ್ಯ ವಿಷಯಗಳ (secret spells) ತಾಣವೆಂದು ತಿಳಿಯಲ್ಪಟ್ಟಿದೆ. ಇಲ್ಲಿ ಜೇಡಿ ಮಣ್ಣಿನ ಪ್ರತಿಮೆಗಳ ಅಂದವಾದ ಸಂಗ್ರಹವಿದ್ದು, ಇವು 17 ನೆಯ ಶತಮಾನಕ್ಕೆ ಸೇರಿದವುಗಳಾಗಿವೆ. ಈ ಸನ್ಯಾಸಿ ಮಠವು ಹಲವು ಬಾರಿ ಅಗ್ನಿಗಾಹುತಿಯಾದರೂ ಕೂಡ ಇದು ಪ್ರತಿಬಾರಿಯೂ ಸಹ ಪುನರ್ನಿರ್ಮಾಣಗೊಳಲ್ಪಟ್ಟಿತು.
ಈ ಸನ್ಯಾಸಿಮಠದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಪ್ರಾರ್ಥನಾ ಕಾರ್ಯಕ್ರಮವು ನಡೆಯುತ್ತದೆ. ಇದು ಮಾತ್ರವಲ್ಲದೇ, ಟಿಬೇಟಿಯನ್ ಕ್ಯಾಲಂಡರ್ ನ ಪ್ರಕಾರ ಪ್ರತೀ ತಿಂಗಳ 10 ನೆಯ ದಿನದಂದು ಲಾಮಾಗಳು ಇಲ್ಲಿ ವಿಶೇಷವಾದ ಪ್ರಾರ್ಥನೆಗಳನ್ನು ಪಠಿಸುತ್ತಾರೆ. ಸಂಗಚೋಲಿಂಗ್ ಸನ್ಯಾಸಿ ಮಠಕ್ಕೆ ಕೇವಲ ಪುರುಷರಿಗೆ ಮಾತ್ರವೇ ಪ್ರವೇಶಾವಕಾಶವಿದೆ.