Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಲ್ಲಿಂಗ್ » ಆಕರ್ಷಣೆಗಳು » ರಬ್ಡೆನ್ಸೆ ಅವಶೇಷಗಳು

ರಬ್ಡೆನ್ಸೆ ಅವಶೇಷಗಳು, ಪೆಲ್ಲಿಂಗ್

2

ರಬ್ಡೆನ್ಸೆ (Rabdentse) ಅವಶೇಷಗಳು ಅರಮನೆಯೊಂದರ ಅವಶೇಷಗಳಾಗಿದ್ದು, ಈ ಅರಮನೆಯು ನೇಪಾಳೀ ಸೇನೆಯಿಂದ ಧ್ವಂಸಗೊಳಿಸಲ್ಪಟ್ಟಿತ್ತು.  ಈ ಅರಮನೆಯ ಅವಶೇಷಗಳು ಹಾಗೂ ಚೊರ್ಟೆನ್ (ಅರಮನೆಯಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದ್ದ ಸ್ಥಳ) ಗಳು ಸಿಕ್ಕಿಂ ನ ಹಿಂದಿನ ಅರಸು ಮನೆತನದ ಅವಶೇಷಗಳಾಗಿ ಉಳಿದಿವೆ.

ರಬ್ಡೆನ್ಸೆ  ಸಿಕ್ಕಿಂ ನ ಎರಡನೆಯ ರಾಜಧಾನಿಯಾಗಿದ್ದು, ಮೊದಲನೆಯದು ಯುಕ್ಸೊಮ್ ಆಗಿದೆ.  ರಬ್ಡೆನ್ಸೆ ಅವಶೇಷಗಳು ಭೌದ್ಧ ತೀರ್ಥಕ್ಷೇತ್ರಗಳ ಮಂಡಲದ ಒಂದು ಭಾಗವಾಗಿದ್ದು, ಯುಕ್ಸೊಮ್ ನಲ್ಲಿರುವ ದುಬ್ಡಿ ಸನ್ಯಾಸಿಮಠದಿಂದ ಮೊದಲ್ಗೊಂಡು ಇಲ್ಲಿ ಅನೇಕ ಸನ್ಯಾಸಿ ಮಠಗಳಿವೆ.

ರಬ್ಡೆನ್ಸೆ ನ ಅವಶೇಷಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ - ಒಂದು ಉತ್ತರ ವಿಭಾಗ (northern wing ) ಮತ್ತು ಇನ್ನೊಂದು ದಕ್ಷಿಣ ವಿಭಾಗ (southern wing).  ಅರಸು ಮನೆತನವು ಉತ್ತರ ವಿಭಾಗದಲ್ಲಿ ವಾಸವಾಗಿತ್ತು.  ಇಲ್ಲೊಂದು ತೆರೆದ ಚೌಕಾಕಾರದ ಸ್ಥಳಾವಕಾಶವಿದ್ದು, ಇಲ್ಲಿ ಅರಸು ಮನೆತನದವರು ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದ "ದಬ್ ಲಘಾಂಗ್" ನ ಅವಶೇಷಗಳಿವೆ.  ಈ ಸ್ಥಳವು ಭಾರತೀಯ ಐತಿಹಾಸಿಕ ಸಮೀಕ್ಷೆ (Archeological Survey of India) ಇವರಿಂದ ಸಂರಕ್ಷಿಸಲ್ಪಟ್ಟಿದ್ದು, ಇದನ್ನೊಂದು ಭಾರತದ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಪರಿಗಣಿಸಲಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu