ಕುಂಜಾಲಿ ಮರ್ರಾಕರ್ ವಸ್ತು ಸಂಗ್ರಹಾಲಯ ಕುಂಜಾಲಿ ಮರ್ರಾಕರ್ಸ್ ಎಂದು ಕರೆಯಲ್ಪಡುತ್ತಿದ್ದ ಯೋಧರು ನೆಲೆಸಿದ್ದ ಪುಟ್ಟ ಗುಡಿಸಲಿನಲ್ಲಿ ನಿರ್ಮಿಸಿದ ಒಂದು ಸಣ್ಣ ವಸ್ತು ಸಂಗ್ರಹಾಲಯ. ಪಯ್ಯೋಲಿಯಿಂದ ಈ ಪ್ರದೇಶ ಕೇವಲ 3 ಕಿಲೋಮೀಟರುಗಳ ಅಂತರದಲ್ಲಿದೆ. ಯುದ್ಧದ ವೇಳೆ ಬಳಸುತ್ತಿದ್ದ ಕತ್ತಿಗಳು, ಫಿರಂಗಿ ಚೆಂಡುಗಳು ಮತ್ತು ಚಾಕುಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ರಾಜ್ಯದ ಪುರಾತತ್ವ ಇಲಾಖೆ ಈ ವಸ್ತು ಸಂಗ್ರಹಾಲಯದ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಪ್ರಾಚೀನ ಮುಸ್ಲೀಂ ಯೋಧರ ನೌಕಾ ಮುಖ್ಯಸ್ಥರು ಇಲ್ಲಿ ವಾಸ್ತವ್ಯ ಮಾಡಿದ್ದಕ್ಕಾಗಿ ಈ ಪ್ರದೇಶಕ್ಕೆ ಕುಂಜಾಲಿ ಮರ್ರಾಕರ್ ಎಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ.
ಕುಂಜಾಲಿ ಮರ್ರಾಕರ್ಸ್ ಪದದ ಮೂಲ ಮಲಯಯಾಳಂ ಆಗಿದ್ದು, ದೋಣಿಯನ್ನು ಹತೋಟಿಯಲ್ಲಿಡುವವರು ಎಂಬರ್ಥವನ್ನು ಕೊಡುತ್ತದೆ. ಕಲ್ಲಿಕೋಟೆಯನ್ನು ಆಳುತ್ತಿದ್ದ ಹಿಂದೂ ಜಾಮೋರಿನ್ ಸಮೂಥಿರಿಯನ್ನು ಸೋಲಿಸಿದ ಮುಸ್ಲೀಂ ಯೋಧರು ಈ ಪ್ರದೇಶವನ್ನು ವಶಪಡಿಸಿಕೊಂಡು ಇಲ್ಲೇ ಠಿಕಾಣಿ ಹೂಡಿದರು ಎನ್ನುತ್ತವೆ ಇತಿಹಾಸದ ದಾಖಲೆಗಳು. ಪೋರ್ಚುಗೀಸ್ ವಿರುದ್ಧ ಹೋರಾಡಿದ ಭಾರತೀಯ ಕರಾವಳಿ ಪಡೆ ಈ ಪ್ರದೇಶದಲ್ಲಿ ಮೊದಲ ನೌಕಾ ಪಡೆಯನ್ನು ಸ್ಥಾಪಿಸಿತು.
ವಿವಿಧ ಕಾಲಘಟ್ಟಗಳಲ್ಲಿ ಕ್ಯಾಲಿಕಟ್ಗೆ ಬಂದು ನೆಲೆಸಿದ ಈಜಿಪ್ಟ್, ಮತ್ತು ಸಮೂಥಿರಿ ಸೇನೆ ಸೇರಿದ ಪೋರ್ಚುಗೀಸ್ ಯೋಧರು ಕೊಚ್ಚಿ ಸಮುದ್ರ ವ್ಯಾಪಾರಿಗಳ ಮೂಲಕ ಇಲ್ಲಿಯೇ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಇಲ್ಲೇ ವಾಸ್ತವ್ಯ ಹೂಡಿದರು ಎಂಬ ದಾಖಲೆಗಳೂ ಇವೆ. ನೌಕಾದಳ ಸ್ಥಾಪನೆಗೆ ಕಾರಣರಾದರೆನ್ನುವ ಉದ್ದೇಶದಿಂದ ಮರ್ರಾಕರ್ಸ್ ಗೆ ಹಲವಾರು ಗೌರವಗಳು ಸಂದಿವೆ.