ಪತ್ನಿಟಾಪ್ ಬಳಿಯ ಇನ್ನೊಂದು ಪ್ರಮುಖ ಆಕರ್ಷಣೆ ಕುಡ್. ನಗರಾಭಿವೃದ್ಧಿಯ ದೃಷ್ಟಿಯಿಂದ ಮೀಸಲಿಟ್ಟಿರುವ ಪ್ರದೇಶ ಇದಾಗಿದ್ದರೂ, ತನ್ನ ಸೌಂದರ್ಯದಿಂದಾಗಿ ನೋಡುಗರನ್ನು ಸೆಳೆಯುತ್ತದೆ. ಸಮುದ್ರ ಮಟ್ಟದಿಂದ 1738 ಮೀ ಎತ್ತರದಲ್ಲಿರುವ ಈ ಪ್ರದೇಶ ಹಿಮಾಲಯ ಶ್ರೇಣಿಯ ಒಂದು ಭಾಗವಾಗಿದೆ. ತನ್ನ ಬಿಸಿ ಹಾಗೂ ತಾಜಾ ವಾತಾವರಣದಿಂದಾಗಿ ಹೆಚ್ಚಿನ ಜನರಿಗೆ ಈ ಪ್ರದೇಶ ಇಷ್ಟವಾಗುತ್ತದೆ. ಇಲ್ಲಿ ಲಭ್ಯವಿರುವ ಸಿಹಿತಿಂಡಿಗಳೂ ಪ್ರಸಿದ್ಧವಾಗಿವೆ. ಹಿಮದಿಂದ ಕೂಡಿರುವ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಇಲ್ಲಿಗೆ ಭೇಟಿ ನೀಡಿ, ಮನಸ್ಸಿಗೆ ಆಹ್ಲಾದ ಪಡೆಯಬಹುದು.