ಪಟ್ನಾ ಮೃಗಾಲಯ ಅಥವಾ ಗಾಂಧಿ ಜೈವಿಕ ಉದ್ಯಾನ ಬೈಲಿ ರಸ್ತೆಯಲ್ಲಿದೆ. ಪಟ್ನಾ ಮೃಗಾಲಯ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಸಂರಕ್ಷಿಸುವ ಕ್ರಮ ಗಣನೀಯವಾಗಿ ನಡೆಯುತ್ತಿದೆ ಮತ್ತು ಸಾಕಾಣಿಯಲ್ಲಿ ಗಮನಾರ್ಹ ಯಶಸ್ಸನ್ನು ಕಂಡಿದೆ.
ಹುಲಿ, ಚಿರತೆ, ಚುಕ್ಕೆ ಚಿರತೆ, ಹಿಪಪಾಟಮಸ್, ಮೊಸಳೆ, ಆನೆ, ಹಿಮಾಲಯದ ಕಪ್ಪು ಕರಡಿ ಮುಂತಾದ ಸುಮಾರು 110 ಜಾತಿಯ 800ಕ್ಕೂ ಹೆಚ್ಚು ಪ್ರಾಣಿಗಳನ್ನು ಕಾಣಬಹುದಾಗಿದೆ. ಮೃಗಾಲಯದಲ್ಲಿ ಸಸ್ಯಶಾಸ್ತ್ರ ಉದ್ಯಾನವಿದ್ದು, ಇದರಲ್ಲಿ ಸುಮಾರು 300 ಜಾತಿಯ ಸಸ್ಯಗಳು, ಔಷಧಿ ಗಿಡಗಳು ಮತ್ತು ಗಿಡಮೂಲಿಕೆಗಳಿವೆ.
ಪಾರ್ಕ್ ನಲ್ಲಿರುವ ಅಕ್ವೇರಿಯಂನಲ್ಲಿ ಸುಮಾರು 35 ಜಾತಿಯ ಮೀನುಗಳಿವೆ ಮತ್ತು ಹಾವಿನ ಮನೆಯಲ್ಲಿ ಐದು ಜಾತಿಯ 32 ಹಾವುಗಳಿವೆ.