ಬುದ್ಧಿಸಂನ್ನು ಕಲಿಸುತ್ತಿರುವ ಪ್ರಮುಖ ಕೇಂದ್ರವಾಗಿರುವ ಪ್ರಾಚೀನ ಒದಂತಪುರಿ ವಿಶ್ವವಿದ್ಯಾಲಯದ ಪ್ರಮುಖ ಪೀಠವೇ ಬಿಹಾರ ಶರೀಫ್. ಈ ಪ್ರದೇಶದ ಇತಿಹಾಸದಲ್ಲಿ ಈ ಪ್ರದೇಶದ ಪ್ರಾಮುಖ್ಯ ಎದ್ದು ಕಾಣಿಸುತ್ತದೆ. ಸಂತ ಸಯ್ಯದ್ ಇಬ್ರಾಹಿಂ ಮಲ್ಲಿಕ್ ಅವರ ಸಮಾಧಿ ಬಿಹಾರ ಶರೀಫದಲ್ಲಿದೆ. ಪಿರ್ ಪಹಾರಿ ಬೆಟ್ಟದ ತುದಿಯಲ್ಲಿ ಈ ಸಮಾಧಿಯಿದೆ. ಸುಮಾರು 600 ವರ್ಷಗಳಿಂದ ಹವಾಮಾನದ ವಿವಿಧ ಮಜಲುಗಳನ್ನು ಮೆಟ್ಟಿ ನಿಂತಿರುವ ಅಪರೂಪದ ಗುಣಮಟ್ಟ ಹೊಂದಿರುವ ಇಟ್ಟಿಗೆಗಳಿಂದ ಕಟ್ಟಲಾಗಿರುವ ಸಮಾಧಿಯ ರಚನೆಯು ಬೆರಗುಗೊಳಿಸುತ್ತದೆ.
ಗುಮ್ಮಟದಲ್ಲಿ ಸಂತರ ಕುಟುಂಬದ ಹತ್ತು ಸದಸ್ಯರ ಸಮಾಧಿಗಳಿವೆ.