ಮಶ್ರು ನೇಕಾರರದು ಪಟಾನದ ಮತ್ತೊಂದು ಸಮುದಾಯ. ಇವರು ರೇಷ್ಮೆ ಮತ್ತು ಹತ್ತಿಯನ್ನು ನೇಯುವ ವಿಶಿಷ್ಟ ಶೈಲಿಯನ್ನು ಅನುಸರಿಸುತ್ತಾರೆ. ಬಟ್ಟೆಯ ಹೊರಭಾಗವನ್ನು ರೇಷ್ಮೆಯಿಂದ ಮತ್ತು ಒಳಭಾಗವನ್ನು ಹತ್ತಿಯಿಂದ ನೇಯುತ್ತಾರೆ. ಮೊದಲು ಭಾರತದ ಎಲ್ಲ ಭಾಗಗಳಲ್ಲಿ ಕಂಡುಬರುತ್ತಿದ್ದ ಈ ವಿಧಾನವು ಈಗ ಕೆಲಭಾಗಗಳಲ್ಲಿ ಮಾತ್ರ ಉಳಿದಿದೆ. ಮೊದಲು ಇದು ಹಿಂದೂ ಸಮುದಾಯದಲ್ಲಿ ಪ್ರಚಲಿತದಲ್ಲಿತ್ತಾದರೂ ಮುಸ್ಲಿಂರು ಶುದ್ಧ ರೇಷ್ಮೆಯನ್ನು ಬಳಸುವಂತಿಲ್ಲವಾದ್ದರಿಂದ ಇದು ಅವರ ಸಮುದಾಯದಲ್ಲಿ ಪ್ರಸಿದ್ಧವಾಯಿತು. ಮಶ್ರು ಎಂದರೆ ‘ಅನುಮೋದಿತ’ ಎಂದರ್ಥ.