ಶೀತ್ಲಾ ಮಾತಾ ದೇವಸ್ಥಾನವು ಜನಪ್ರಿಯ ಧಾರ್ಮಿಕ ಕೇಂದ್ರ. ನಗರದ ಗಡಿಯಲ್ಲಿರುವ ಈ ದೇವಸ್ಥಾನವು ಶೀತ್ಲಾ ದೇವಿಗೆ ಅರ್ಪಿತವಾದದ್ದು. ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ಅಪಾರ ಪ್ರಮಾಣದ ಭಕ್ತರು ಇಲ್ಲಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಶೀತ್ಲಾ ಮಾತಾ ಹಬ್ಬವನ್ನು ಆಚರಿಸಲಾಗುತ್ತದೆ. ಭಕ್ತರು ದೇವಿಗೆ ನೀರು, ಹಾಲು ಮತ್ತು ಸಿಹಿಯನ್ನು ನೀಡುತ್ತಾರೆ. ಈ ದಿನ ಭಕ್ತರು ಆಹಾರವನ್ನು ಬೇಯಿಸುವುದಿಲ್ಲ. ಹಿಂದಿನ ದಿನ ಮಾಡಿದ ಅಡುಗೆಯನ್ನೇ ಅವರು ಸೇವಿಸುತ್ತಾರೆ. ಇದರಿಂದಾಗಿ ದೇವಿಯ ಸಿಟ್ಟು ತಣಿದು ವರ ಕೊಡುತ್ತಾಳೆ ಎಂದು ನಂಬಲಾಗಿದೆ.