Search
  • Follow NativePlanet
Share
ಮುಖಪುಟ » ಸ್ಥಳಗಳು» ಪೌಂಟಾ ಸಾಹಿಬ್

ಪೌಂಟಾ ಸಾಹಿಬ್ - ಸಿಖ್ಖರ ಪವಿತ್ರ ಕ್ಷೇತ್ರ

22

ಯಮುನಾ ನದಿಯ ದಂಡೆಯಲ್ಲಿರುವ ಪೌಂಟಾ ಸಾಹಿಬ್ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುವ ಸುಂದರವಾದ ತಾಣ. ಈ ಐತಿಹಾಸಿಕ ಮಹತ್ವದ ಇದನ್ನು ಸಿರ್ಮೋರ್ನ ರಾಜ ಮೈದಿನಿ ಪ್ರಕಾಶನ ಆಹ್ವಾನದ ಮೇರೆಗೆ ಬಂದು ನಾಲ್ಕು ವರ್ಷಗಳ ಕಾಲ ನೆಲೆಸಿದ್ದ 10 ನೇ ಸಿಖ್ ಗುರು ಗುರುಗೋವಿಂದ್ಸಿಂಗ್ ಸ್ಥಾಪಿಸಿದರು. ರಾಜಾ ಮೈಧಿನಿ ಪ್ರಕಾಶನಿಗೆ 16 ವರ್ಷ ವಯಸ್ಸಾಗಿದ್ದಾಗಲೇ ಇದು ನಿರ್ಮಾಣವಾಯಿತು. ವ್ಯುತ್ಪತ್ತಿಶಾಸ್ತ್ರದ ಪ್ರಕಾರ 'ಪೌಂಟಾ' ಅಂದರೆ 'ಕಾಲೂರಿದ ಹೆಗ್ಗುರುತು'. ಸಾಲ್ ಮರಗಳ ಸಮೃದ್ಧ ಹಸಿರು ಕಾಡುಗಳು, ಪೌಂಟಾ ಸಾಹಿಬ್ ಅನ್ನು ಆವರಿಸಿದ್ದು, 350 ಮೀ. ಅಗಲದ ವ್ಯಾಪ್ತಿ ಹೊಂದಿದೆ. ಯಮುನಾ ನದಿಯಲ್ಲಿ ಪ್ರವಾಹ ಬಂದಾಗ ಸಿಖ್ ಧರ್ಮಗ್ರಂಥ 'ದಾಸಮ್' ಅನ್ನು ಬರೆಯುತ್ತಿದ್ದ ಗುರು ಗೋವಿಂದ್ರಿಗೆ ಯಾವುದೇ ರೀತಿಯ ಅಡಚಣೆ ಆಗಬಾರದು ಎಂಬ ಕಾರಣಕ್ಕೆ ಈ ಭವನವನ್ನು ನಿರ್ಮಾಣ ಮಾಡಲಾಯಿತು ಎನ್ನುತ್ತದೆ ದಂತಕಥೆಯೊಂದು.

ಪೌಂಟಾ ಸಾಹಿಬ್ನ ಸುತ್ತಮುತ್ತಲೂ ಅನೇಕ ಜನಪ್ರಿಯ ಆಕರ್ಷಣೆಯ ಕೇಂದ್ರಗಳಿವೆ. ಅವುಗಳಲ್ಲಿ ಮುಖ್ಯವಾಗಿ ಅಸ್ಸಾನ್ ಸರೋವರ, ಸಹಸ್ತ್ರಧಾರಾ ಸರೋವರಗಳು. ಇಲ್ಲಿಗೆ ಪ್ರವಾಸಕ್ಕೆ ಬರುವವರು ಸುಂದರವಾದ ಅಸ್ಸಾನ್ ಸರೋವರಕ್ಕೆ ಭೇಟಿ ನೀಡಲೇಬೇಕು. ಹಿಮಾಚಲ ಪ್ರದೇಶದ ಪ್ರವಾಸೋಧ್ಯಮ ಇಲಾಖೆ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿದೆ. ಇಲ್ಲಿ ವೇಗದ ಬೋಟಿಂಗ್, ಪೆಡಲ್ ದೋಣಿವಿಹಾರ, ಸೇಯ್ಲ್ದೋಣಿವಿಹಾರವನ್ನು ಆನಂದಿಸಬಹುದಾಗಿದೆ. ಸಹಸ್ತ್ರಧಾರಾವು, ಯಮುನಾ ಮತ್ತು ತಮ್ಸಾ ಎಂದೂ ಕರೆಯಲ್ಪಡುವ ಟಾಂಗ್ ನದಿಗಳು ಸೇರಲ್ಪಡುವ ಸುಂದರವಾದ ಪ್ರದೇಶವಾಗಿದೆ.

ಸಿಖ್ಖರ ಪವಿತ್ರ ಯಾತ್ರಾ ಸ್ಥಳಗಳನ್ನು ಪೌಂಟಾ ಸಾಹಿಬ್ ಒಳಗೊಂಡಿದೆ ಅವುಗಳಲ್ಲಿ ಮುಖ್ಯವಾಗಿ ಗುರುದ್ವಾರ ಪೌಂಟಾಸಾಹಿಬ್, ಗುರುದ್ವಾರ ತಿರಗರ್ ಸಾಹಿಬ್, ಗುರುದ್ವಾರ ಭಂಗಾನಿ ಸಾಹಿಬ್, ಗುರುದ್ವಾರ ಶೆರ್ಗರ್ ಸಾಹಿಬ್ ಗಳು ಸೇರಿವೆ. ಡೈ-ಕಾ-ಮಂದಿರ, ಖೋದ್ರಾ ಡಾಕ್ ಪತ್ಥರ್, ನಗ್ನೌನಾ ದೇವಸ್ಥಾನ, ರಾಮ ದೇವಸ್ಥಾನ, ಕತಸಾನ್ ದೇವಿ ದೇವಸ್ಥಾನ, ಯಮುನಾ ದೇವಾಲಯ, ಶಿವ ದೇವಾಲಯ ಮತ್ತು ಬಾಬಾ ಗರೀಬ್ ನಾಥ್ ದೇಗುಲಗಳು ಇಲ್ಲಿಯ ಪ್ರಮುಖ ಭಕ್ತಿಕೇಂದ್ರಗಳು. ಪೌಂಟಾ ಸಾಹಿಬ್ಗೆ ಬರಲಿಚ್ಛಿಸುವ ಪ್ರವಾಸಿಗರು ಬಸ್, ರೈಲು ಮತ್ತು ವಿಮಾನಗಳ ಮೂಲಕ ಬರಬಹುದಾಗಿದೆ. ಬೇಸಿಗೆ, ಶರತ್ಕಾಲ, ಹಾಗೂ ವಸಂತಕಾಲಗಳು ಇಲ್ಲಿಗೆ ಬರುವುದಕ್ಕೆ ಉತ್ತಮ ಸಮಯ.

ಪೌಂಟಾ ಸಾಹಿಬ್ ಪ್ರಸಿದ್ಧವಾಗಿದೆ

ಪೌಂಟಾ ಸಾಹಿಬ್ ಹವಾಮಾನ

ಉತ್ತಮ ಸಮಯ ಪೌಂಟಾ ಸಾಹಿಬ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪೌಂಟಾ ಸಾಹಿಬ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ NH-72 ಮೂಲಕ ಪೌಂಟಾ ಸಾಹಿಬ್ಗೆ ಬರಬಹುದಾಗಿದೆ. 45 ಕಿಮೀ ದೂರದ ದೆಹ್ರಾದೂನ್ ನಿಂದ ಚಂಡೀಗಢಕ್ಕೆ ತೆರಳುವ ಎಲ್ಲ ಬಸ್ಗಳು ಈ ಮಾರ್ಗದಲ್ಲಿಯೇ ಚಲಿಸುತ್ತವೆ. 20 ಕಿ. ಮೀ ದೂರದಲ್ಲಿರುವ ಹೃಷಿಕೇಶದಿಂದ ಇಲ್ಲಿಗೆ ಹೆಚ್ಚಿನ ಬಸ್ ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    45 ಕಿಮೀ ಅಂತರದಲ್ಲಿರುವ ದೆಹ್ರಾಡೂನ್ ಇಲ್ಲಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ. 56 ಕಿಮೀ ದೂರದಲ್ಲಿರುವ ಯಮುನಾನಗರ ರೈಲು ನಿಲ್ದಾಣದ ಮೂಲಕವೂ ಇಲ್ಲಿಗೆ ಬರಬಹುದು. ಭಾರತದ ಪ್ರಮುಖ ನಗರಗಳೊಂದಿಗೆ ರೈಲು ಸಂಪರ್ಕ ಇಲ್ಲಿಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    70 ಕಿಲೋಮೀಟರ್ ದೂರದಲ್ಲಿರುವ ಜಾಲಿ ಗ್ರಾಂಟ್ ಪೌಂಟಾಸಾಹಿಬ್ಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. 145 ಕಿಮೀ ದೂರದಲ್ಲಿರುವ ಜಬ್ಬರ್ಹಟ್ಟಿ ವಿಮಾನ ನಿಲ್ದಾಣದ ಮೂಲಕವೂ ಬರಬಹುದಾಗಿದೆ. ಈ ನಿಲ್ದಾಣಗಳು ದಹಲಿ, ಮುಂಬೈ ಮತ್ತು ಶ್ರೀನಗರ ಗಳನ್ನು ಸಂಪರ್ಕಿಸುತ್ತದೆ. ಇಲ್ಲಿಂದ ಮುಂದೆ ಬಸ್ ಮತ್ತು ಖಾಸಗಿ ಕ್ಯಾಬ್ಗಳನ್ನು ಪಡೆದು ಪ್ರಯಾಣ ಮುಂದುವರೆಸಬೇಕು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun