Search
  • Follow NativePlanet
Share

ಪನ್ನಾ - ವಜ್ರಗಳ ನಗರ

12

ಪನ್ನಾ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿದ್ದು ವಜ್ರಗಳ ಗಣಿಗಳಿಗೆ ಹೆಸರುವಾಸಿಯಾಗಿದೆ. ಈ ವಜ್ರಗಳನ್ನು  ಪ್ರತೀ ತಿಂಗಳಾಂತ್ಯದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಸಮ್ಮುಖದಲ್ಲಿ ಹರಾಜು ಹಾಕಲಾಗುವುದು. ಇದಲ್ಲದೇ ಈ ನಗರದಲ್ಲಿ ಹಿಂದೂ ಸಂಪ್ರದಾಯಕ್ಕೆ ಪ್ರಾಮುಖ್ಯತೆಯಿರುವ ಹಲವು ಸಂಗತಿಗಳೂ ಇವೆ. ಈ ಸ್ಥಳದಲ್ಲಿಯೆ ಮಹಾಮತಿ ಪ್ರನ್ನಥ್ ಅವರು ಮನುಷ್ಯನ ಆತ್ಮಸಾಕ್ಷಾತ್ಕಾರದ ಕುರಿತು ಸಂದೇಶವನ್ನು ಭೋದಿಸಿದ್ದರು. ಮಹಾಮತಿಯವರು ಪನ್ನಾದಲ್ಲಿ ತಮ್ಮ ಹನ್ನೊಂದು ವರ್ಷ ಕಳೆದ ಬಳಿಕ ಇಲ್ಲಿಯೆ ಸಮಾಧಿ ತೆಗೆದುಕೊಳ್ಳಲು ನಿರ್ಧರಿಸಿದ್ದರು ಎನ್ನುವುದು ನಂಬಿಕೆ.

ಪನ್ನಾ ಸುತ್ತಮುತ್ತವಿರುವ ಪ್ರೇಕ್ಷಣೀಯ ಸ್ಥಳಗಳು

ಪನ್ನಾ ಪ್ರವಾಸೋದ್ಯಮಕ್ಕೆ ಪ್ರಮುಖವಾಗಿ ಪ್ರವಾಸಿಗರು ಹರಿದು ಬರುವುದು ಪನ್ನಾ ರಾಷ್ಟೀಯ ಉದ್ಯಾನವನ, ಪಾಂಡವ ಗುಹೆಗಳನ್ನು ನೋಡುವುದಕ್ಕಾಗಿ. ಜಲಪಾತದ ತಾಣವಾಗಿದ್ದರೂ ಸಹ ಈ ನಗರ ಪ್ರಸಿದ್ದಿಯಾಗಿದ್ದು ರಾಷ್ಟೀಯ ಉದ್ಯಾನವನದ ಮೂಲಕ. ಪ್ರಕೃತಿ ಸೌಂದರ್ಯ ಬಯಸುವವರು ಮಧ್ಯಪ್ರದೇಶದ ಈ ನಗರದ ಮೂಲಕ ಮನೋರಂಜನೆ ಅನುಭವಿಸಬಹುದು, ಯಾಕೆಂದರೆ ಉದ್ಯಾನವನ ಮತ್ತು ಸುಂದರವಾದ ಪಿಕ್ನಿಕ್ ಸ್ಥಳಗಳು ನಗರವನ್ನು ಆವರಿಸಿಕೊಂಡಿದೆ.

ಪನ್ನಾ - ಹುಲಿಗಳ ತವರೂರು

ಪನ್ನಾ ರಾಷ್ಟೀಯ ಉದ್ಯಾನವನ ಪನ್ನಾ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ ಯಾಕೆಂದರೆ ಇಲ್ಲಿನ ವನ್ಯಜೀವಿ ಧಾಮ ಅತ್ಯಂತ ವಿರಳವಾಗಿ ಕಾಣಸಿಗುವ ಹುಲಿಗಳನ್ನು ಹೊಂದಿದೆ. ಈ ಉದ್ಯಾನವನವು ಖುಜರಾಹೋಕ್ಕೆ ಹತ್ತಿರದಲ್ಲಿದ್ದು ರಿಸಾರ್ಟ್ಸ್ ಮತ್ತು ಹೋಟೆಲ್ ಗಳು ರಾತ್ರಿ ತಂಗಲು ತುಂಬಾ ಸಂಖ್ಯೆಯಲ್ಲಿವೆ.

ಪನ್ನಾ ತಲುಪುವುದು ಹೇಗೆ?

ಪನ್ನಾ ರಾಜ್ಯದ ಇತರ ನಗರ ಮತ್ತು ಪಟ್ಟಣಗಳಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ.

ಪನ್ನಾ ವಾತಾವರಣ

ಪನ್ನಾದ ಭೌಗೋಳಿಕ ಪ್ರದೇಶ ಉಪ ಉಷ್ಣವಲಯ ವಾತಾವರಣವಿರುವುದರಿಂದ, ಅಕ್ಟೋಬರ್ ಮತ್ತು ಎಪ್ರಿಲ್ ತಿಂಗಳ ಮಧ್ಯೆ ಇಲ್ಲಿ ಪ್ರಯಾಣಿಸುವುದು ಕನಸಿನ ಲೋಕದಲ್ಲಿ ತೇಲುವಂತೆ ಮಾಡುತ್ತದೆ.

ಪನ್ನಾ ಪ್ರಸಿದ್ಧವಾಗಿದೆ

ಪನ್ನಾ ಹವಾಮಾನ

ಉತ್ತಮ ಸಮಯ ಪನ್ನಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪನ್ನಾ

  • ರಸ್ತೆಯ ಮೂಲಕ
    ಸ್ಲೀಪರ್, ಎಸಿ, ಲಕ್ಸುರಿ ಕೋಚ್ ಬಸ್ ಸೌಲಭ್ಯ ದೆಹಲಿ, ಆಗ್ರಾ, ಜಾನ್ಸಿ, ಲಕ್ನೋ, ಫರಿದಾಬಾದ್, ವಾರಣಾಸಿ, ನಾಗ್ಪುರ, ಜಬಲ್ಪುರ, ಅಲಹಾಬಾದ್, ಧೋಲಾಪುರ, ಇಂದೋರ್, ಭೋಪಾಲ್ ಮುಂತಾದ ನಗರಗಳಿಂದ ಮತ್ತು ಮಧ್ಯಪ್ರದೇಶಗಳಿಂದಲೂ ಪನ್ನಾಗೆ ಬಸ್ ಸಂಚಾರದ ವ್ಯವಸ್ಥೆಯಿದೆ. ಪನ್ನಾದಿಂದ ರಸ್ತೆ ಸಂಚಾರ ಆರಾಮದಾಯಕವಾಗಿದೆ, ಯಾಕೆಂದರೆ ಇದು ರಾಷ್ಟ್ರೀಯ ಹೆದ್ದಾರಿಗೆ ಕೊಂಡಿಯಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪನ್ನಾ ನಗರದಲ್ಲಿ ರೈಲ್ವೆ ನಿಲ್ದಾಣವಿಲ್ಲ, ಹತ್ತಿರದ ರೈಲು ನಿಲ್ದಾಣವೆಂದರೆ ಖಜುರಾಹೋ ಮತ್ತು ಸತ್ನಾ. ಪನ್ನಾದಿಂದ ಖಜುರಾಹೋ ರೈಲ್ವೆ ನಿಲ್ದಾಣವು 45 ಕಿ.ಮೀಟರ್ ಮತ್ತು ಸತ್ನಾ ನಿಲ್ದಾಣವು 75 ಕಿ.ಮೀಟರ್ ದೂರದಲ್ಲಿದೆ. ಎರಡೂ ರೈಲು ನಿಲ್ದಾಣದಿಂದ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬಸ್ ಮತ್ತು ಟ್ಯಾಕ್ಸಿ ಇಲ್ಲಿಂದ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪನ್ನಾ ವಿಮಾನ ನಿಲ್ದಾಣವು ಸದ್ಯ ಕಾರ್ಯನಿರತವಾಗಿಲ್ಲ, ಹಾಗಾಗಿ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಖಜುರಾಹೋ ನಿಲ್ದಾಣ, ಇದು ಪನ್ನಾ ನಗರದಿಂದ ಐವತ್ತು ಕಿಲೋಮೀಟರ್ ದೂರದಲ್ಲಿದೆ. ಟ್ಯಾಕ್ಸಿ ಮತ್ತು ಬಸ್ ವ್ಯವಸ್ಥೆ ವಿಮಾನ ನಿಲ್ದಾಣದಿಂದಿದ್ದು ಪನ್ನಾಗೆ ಪ್ರವಾಸಿಗರನ್ನು ತಲುಪಿಸುತ್ತದೆ, ಟ್ಯಾಕ್ಸಿ ದರ ಬಸ್ ದರಕ್ಕಿಂತ ಹೆಚ್ಚು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City