Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು » ಇಬ್ರಾಹಿಂ ಲೋಧಿಯ ಸಮಾಧಿ

ಇಬ್ರಾಹಿಂ ಲೋಧಿಯ ಸಮಾಧಿ, ಪಾಣಿಪತ್

1

ಇಬ್ರಾಹಿಂ ಲೋಧಿಯು ಪಾಣಿಪತ್‍ನಲ್ಲಿ 21 ಏಪ್ರಿಲ್ 1526ರಲ್ಲಿ ನಡೆದ ಮೊದಲ ಯುದ್ಧದಲ್ಲಿ ಮೊದಲ ಯುದ್ದದಲ್ಲಿ ಮೊಘಲ್ ಸಾಮ್ರಾಟ ಬಾಬರನ ವಿರುದ್ಧ ಹೋರಾಡಿದ್ದನು. ಈ ಯುದ್ಧದಲ್ಲಿ ಲೋಧಿಯು ಸೋತು ಕೊಲ್ಲಲ್ಪಟ್ಟನು. ಈ ಯುದ್ಧವು ಭಾರತದಲ್ಲಿ ಪ್ರಥಮ ಬಾರಿಗೆ ಫಿರಂಗಿ ಯುದ್ಧ, ಗನ್‍ಪೌಡರ್ ಮತ್ತು ಬೆಂಕಿ ಕಾರುವ ಕೆಲವು ಆಯುಧಗಳನ್ನು ಪರಿಚಯಿಸಿದ ಖ್ಯಾತಿಗೆ ಪಾತ್ರವಾಯಿತು.

ಅಂದಾಜಿನ ಪ್ರಕಾರ ಬಾಬರನ ಸೇನೆಯಲ್ಲಿ 15,000 ಸೈನಿಕರು ಮತ್ತು 25 ಫಿರಂಗಿಗಳು ಇದ್ದವು. ಇಬ್ರಾಹಿಂ ಲೋಧಿ ಬಳಿ ಸರಿ ಸುಮಾರು 10,00,000 ಸೈನಿಕರು ಇದ್ದರಂತೆ. ಅದರಲ್ಲಿ ಅಂದಾಜು 30,000 ಯೋಧರಾದರೆ 40,000 ಶಿಬಿರವನ್ನು ನೋಡಿ ಕೊಳ್ಳುವ ಸಹಾಯಕ ಸಿಬ್ಬಂದಿಯಾಗಿದ್ದರಂತೆ. ಜೊತೆಗೆ ಈತನ ಬಳಿ ಸುಮಾರು 1000 ಆನೆಗಳು ಬೇರೆ ಇದ್ದವಂತೆ.

ಇಷ್ಟೆಲ್ಲ ಶಕ್ತಿ ಸಾಮರ್ಥ್ಯವಿದ್ದರು, ಇಬ್ರಾಹಿಂ ಲೋಧಿ ಬಾಬರನ ಮೇಲೆ ಸೋತಿದ್ದು, ಬಾಬರನ ಯುದ್ಧ ತಂತ್ರಗಳ ಚಾಣಕ್ಷತೆಯಿಂದಾಗಿ. ಬಾಬರ್ ಈ ಯುದ್ಧದಲ್ಲಿ ತನ್ನ ಫಿರಂಗಿಗಳನ್ನು ಗಾಡಿಗಳ ಹಿಂದೆ, ಪ್ರಾಣಿಗಳ ಚರ್ಮದಿಂದ ಮಾಡಿದ ತುಂಡಾಗದಂತಹ ಹಗ್ಗಗಳಿಂದ ಕಟ್ಟಿದ್ದನು. ಇದರಿಂದ ಆ ಫಿರಂಗಿಗಳಿಗೆ ಮರೆಯು ದೊರಕಿದ್ದಲ್ಲದೆ, ಅವುಗಳಿಂದ ಮದ್ದನ್ನು ಹಾರಿಸುವಾಗ, ಅವು ಹಿಂದಕ್ಕೆ ಚಲಿಸುವ ತಾಪತ್ರಯಗಳು ಸಹ ಇರಲಿಲ್ಲ.

ಇಬ್ರಾಹಿಂ ಲೋಧಿಯು ಈ ಯುದ್ಧದಲ್ಲಿ ಮರಣವನ್ನಪ್ಪಿದಾಗ, ಆತನ ಅನುಯಾಯಿಗಳು ದಿಕ್ಕು ಗಾಣದೆ ಆತನ ಶವವನ್ನು ತೊರೆದು ಹೋದರು. ಆತನ ಪಾರ್ಥೀವ ಶರೀರವನ್ನು ತಂದು ಪಾಣಿಪತ್‍ನ ಪ್ರಸ್ತುತ ತಾಲ್ಲೂಕು ಕಚೇರಿಯಾಗಿರುವ ಸ್ಥಳದಲ್ಲಿ ಸಮಾಧಿ ಮಾಡಲಾಯಿತು. ಮುಂದೆ ಬ್ರಿಟೀಷ್ ಆಡಳಿತಾವಧಿಯಲ್ಲಿ ಇದಕ್ಕೆ ಒಂದು ಸರಳ ವೇದಿಕೆಯನ್ನು ನಿರ್ಮಿಸಲಾಯಿತು.ಜೊತೆಗೆ ಇದರ ಬಗ್ಗೆ ಸಂಕ್ಷಿಪ್ತವಾಗಿ ಉರ್ದು ಭಾಷೆಯಲ್ಲಿ ಒಂದು ಶಾಸನವನ್ನು ಸಹ ಬರೆಸಲಾಯಿತು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat