ಪಾಣಿಪತ್ನಲ್ಲಿರುವ ಸುಮಾರು 8ನೇ ಶತಮಾನದ ದೇವಿ ದೇವಾಲಯವು, ಮರಾಠ ರಾಜರಿಂದ ನಿರ್ಮಾಣಗೊಂಡ ದೇವಾಲಯವಾಗಿದೆ. ಇದು ಈ ಪ್ರಾಂತ್ಯದಲ್ಲಿ ಮರಾಠರ ಪರಂಪರೆಯನ್ನು ಸಾರುತ್ತಿರುವ ಅದ್ಭುತವಾದ ಸ್ಮಾರಕವಾಗಿದೆ. ಒಂದು ಕೆರೆಯ ದಂಡೆಯಲ್ಲಿ ನೆಲೆಗೊಂಡಿರುವ ಈ ದೇವಾಲಯವು ಇಲ್ಲಿನ ಸ್ಥಳೀಯ ದೇವತೆಯ ಪೂಜೆಗಾಗಿ ನಿರ್ಮಿಸಲ್ಪಟ್ಟಿದೆ. ಇದರ ಒಳಗೆ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ಪ್ರಾಚೀನ ವಿಗ್ರಹವನ್ನು ನಾವು ನೋಡಬಹುದು.