Search
  • Follow NativePlanet
Share
ಮುಖಪುಟ » ಸ್ಥಳಗಳು» ಪಂಗೊಂಗ್

ಪಂಗೊಂಗ್ : ಮೂರು ದೇಶಗಳನ್ನು ಸೇರಿಸುವ ಸರೋವರ

13

ಪ್ರವಾಸೋದ್ಯಮವನ್ನೇ ಪ್ರಮುಖ ಉದ್ಯಮವನ್ನಾಗಿಸಿ ಕೊಂಡಿರುವ ಜಮ್ಮು-ಕಾಶ್ಮೀರ ರಾಜ್ಯದ ಲೇಹ್ ಜಿಲ್ಲೆಯಲ್ಲಿರುವ ಸರೋವರವೇ ಪಂಗೊಂಗ್ ತ್ಸೊ. ಸ್ಥಳಿಯ ಲಡಾಖಿ ಭಾಷೆಯಲ್ಲಿ "ತ್ಸೊ" ಎಂದರೆ ಸರೋವರ ಎಂದರ್ಥ.

ಹಿಮಾಲಯದಲ್ಲಿರುವ ಈ ಸರೋವರವು ಸಮುದ್ರ ಮಟ್ಟದಿಂದ  4250 ಮೀಟರ್ (13,900 ಅಡಿ) ಎತ್ತರದಲ್ಲಿದೆ. ಹಾಗು 134  ಕಿ.ಮೀ  ಉದ್ದವಾಗಿದ್ದು ಲಡಾಖ್ ನಿಂದ ಚೀನಾ ವರೆಗೆ ವ್ಯಾಪಿಸಿದೆ. ಚೀನಾದ ಅಡಿಯಲ್ಲಿರುವ ಟಿಬೇಟಿನ ಗಡಿಯಾದ ಛಂಗ್ಥಂಗ್ ಪ್ರಸ್ಥಬೂಮಿಯವರೆಗೂ ಈ ಸರೋವರ ಹಬ್ಬಿದ್ದು, ಇದರ ಅರ್ಧಕ್ಕಿಂತ ಹೆಚ್ಚು ಭಾಗವು ಟೀಬೇಟಿನಲ್ಲಿದೆ. ಭಾರತವು ಚೀನಿಯರ ಆಕ್ರಮಣಕಾರಿ ಚಟುವಟಿಕೆಗಳನ್ನು ಸಲೀಸಾಗಿ ಗಮನಿಸಬಹುದಾದಂತಹ ಸ್ಥಳದಲ್ಲಿರುವದರಿಂದ ಹಾಗೂ ಸರೋವರವು ವಾಸ್ತವಿಕ ನಿಯಂತ್ರಣ ರೇಖೆಯ ಮೇಲೇ ವ್ಯಾಪಿಸಿರುವದರಿಂದ ಇದೊಂದು ವಿವಾದಿತ ಪ್ರದೇಶವೂ ಆಗಿದೆ. ಅಕ್ಟೋಬರ 20, 1962 ರಲ್ಲಿ ಪಂಗೊಂಗ್ ಸರೋವರವು ಸೈನೋ-ಇಂಡಿಯನ್ ಯುದ್ದವನ್ನೆ ಕಂಡಿತ್ತು. ಚೀನೀಯರ ಕಡೆಯಿಂದ ಅತಿಕ್ರಮಣಗಳು ಅಲ್ಲಿ  ಸಾಮಾನ್ಯ.   

ಇದೊಂದು ಉಪ್ಪುನೀರಿನ ಸರೋವರ, ಆದಗ್ಯೂ ಚಳಿಗಾಲದಲ್ಲಿ ಇದು ಸಂಪೂರ್ಣವಾಗಿ ಹೆಪ್ಪುಗಟ್ಟಿರುತ್ತದೆ. ಇದು ಗಡುಸುನೀರಿನ ಸರೋವರವಾದ್ದರಿಂದ ಇಲ್ಲಿ ಕೆಲವೇ ಕೆಲವು ಸೂಕ್ಷ್ಮ ಸಸ್ಯವರ್ಗಗಳು ಹಾಗು ಅತಿ ಕಡಿಮೆ ಜಲಜೀವಿಗಳು ಕಂಡುಬರುತ್ತವೆ. ಆದರೆ ಸರೋವರದ ಮೇಲ್ಮೈ ಮೇಲೆ ತೇಲುವ ಹಲವಾರು ಬಾತುಕೋಳಿಗಳು ಮತ್ತು ಚಿಲಿಪಿಲಿ ಗೈಯುತ್ತ ಹಾರಾಡುವ ವಿವಿಧ ಪ್ರಭೇಧದ ಹಕ್ಕಿಗಳು ನೋಡುಗರ ಗಮನ ಸೆಳೆಯುತ್ತವೆ. ಸರೋವರದ ಸುತ್ತಲಿನ ಜೌಳುನೆಲದಲ್ಲಿ ಕೆಲವು ಪ್ರಭೇಧಗಳ ದೀರ್ಘಕಾಲಿಕ ಮೂಲಿಕೆಗಳು ಮತ್ತು ಪೊದೆಗಳು ಸಹ ಕಾಣಸಿಗುವುದುಂಟು. ವಲಸೆ ಪಕ್ಷಿಗಳು ಸೇರಿದಂತೆ ವಿವಿಧ ಜಾತಿಯ ಹಲವಾರು ಪಕ್ಷಿಗಳು ತಮ್ಮ ವಂಶಾಭಿವೃದ್ದಿಯ ಸಮಯದಲ್ಲಿ ಇಲ್ಲಿಗೆ ಬರುವುದುಂಟು. ಅಲ್ಲದೆ, ಬೇಸಿಗೆ ಕಾಲದಲ್ಲಿ, ಬಾರ್ ಹೆಡೆಡ್ ಹೆಬ್ಬಾತು ಮತ್ತು ಬ್ರಾಹ್ಮಿನಿ ಬಾತುಕೋಳಿಗಳನ್ನು ಸಾಮಾನ್ಯವಾಗಿ ಇಲ್ಲಿ ಕಾಣಬಹುದು. ಇದರ ಜೊತೆಗೆ, ಸರೋವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಿಯಾಂಗ್ ಮತ್ತು ಮರ್ಮೋಟ್ ಸೇರಿದಂತೆ ವಿವಿಧ ಪ್ರಭೇಧಗಳ ವನ್ಯಜೀವಿಗಳನ್ನೂ ಸಹ ಕಾಣಬಹುದು.

ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ, ಜೌಗು ಭೂಮಿ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ವ್ಯವಸ್ಥೆಯಾದ ರಾಮ್ಸರ್ ಕನ್ವೆನ್ಷನ್ಗೆ, ಈ ಕೆರೆಯು ಆಯ್ಕೆಯಾಗುವ ಹಂತದಲ್ಲಿದೆ. ಈ ವ್ಯವಸ್ಥೆಯು ವಿಶೇಷವಾಗಿ ಅಂತರಾಷ್ಟ್ರೀಯ ಪ್ರಾಮುಖ್ಯತೆಗಳಿಸಿರುವ  ಜೌಗುನೆಲದ ಸ್ಥಾನಿಕ ಜಲಪಕ್ಷಿಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ, ಪಂಗೊಂಗ್ ಸರೋವರವು ಈ ಕನ್ವೆನ್ಷನ್ ನಲ್ಲಿ ಆಯ್ಕೆಯಾದರೆ ಇದೆ ದಕ್ಷಿಣ ಏಷ್ಯಾದ ಮೊದಲ ಟ್ರಾನ್ಸ್-ಬೌಂಡರಿ ಸರೋವರವಾಗಲಿದೆ. ಪ್ರಸ್ತುತ ಇದರ ದಂಡೆಯಲ್ಲಿ,5 ಮೀ (16 ಅಡಿ)ಗಳಷ್ಟು ಮಣ್ಣು ಮತ್ತು ಮರಳುಗಳ ದಪ್ಪನೆಯ ಪದರ ಹಲವಾರು ವರ್ಷಗಳಿಂದ ಶೇಖರಿಸಲ್ಪಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಸರೋವರವು ಕುಸಿಯುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ದಾಖಲೆಗಳು ಸ್ಪಷ್ಟಪಡಿಸುತ್ತವೆ.

ಕೆಲವು ವರ್ಷಗಳ ಹಿಂದೆ, ಪಂಗೊಂಗ್ ಸರೋವರವು, ಸಿಂಧು ನದಿಯ ಉಪನದಿಯಾದ ಶ್ಯೊಕ್ ನದಿಗೆ ಹೊರಹರಿವನ್ನು(ಔಟ್ ಲೆಟ್) ಹೊಂದಿತ್ತು. ಆದರೆ   ನೈಸರ್ಗಿಕ ಆಣೆಕಟ್ಟಿನಿಂದಾಗಿ ಇದು ಮುಚ್ಚಲ್ಪಟ್ಟಿತು. ಭಾರತದ ಕಡೆಯಿಂದ ಈ ಸರೋವರಕ್ಕೆ ಎರಡು ಹೊಳೆಗಳಿಂದ ನೀರು ಹರಿದು ಬರುತ್ತದೆ. ಈ ಹೊಳೆಗಳು ತಮ್ಮ ಹರಿವಿನುದ್ದಕ್ಕೂ ಎರಡೂ ಬದಿಯಲ್ಲಿ ತೇವ ಭರಿತ ಜೌಳುನೆಲವನ್ನು ನಿರ್ಮಿಸುತ್ತಾ ಸಾಗುತ್ತವೆ.  

2010 ರಲ್ಲಿ '3 ಇಡಿಯಟ್ಸ್ ' ಮತ್ತು ಅದಕ್ಕೂ ಮೊದಲು ಅಂದರೆ 2006 ರಲ್ಲಿ ತೆರೆಕಂಡಿದ್ದ 'ದಿ ಫಾಲ್ ' ನಂತಹ ಚಿತ್ರಗಳಲ್ಲಿ ಈ ಸರೋವರದ ಸೌಂದರ್ಯವನ್ನು ಕ್ಯಾಮರಾ ಕಣ್ಣುಗಳು ಸೆರೆಹಿಡಿದು ದೊಡ್ಡ ಪರದೆ ಮೇಲೆ ತೋರಿಸಿದ್ದವು. ಈ ಸಿನೆಮಾಗಳ ಯಶಸ್ಸಿನ ನಂತರ ಪಂಗೊಂಗ್ ಸರೋವರವು  ವಿಶ್ವದೆಲ್ಲೆಡೆಯ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯವಾಗಿದೆ ಎನ್ನಬಹುದು.

ಪ್ರಸ್ತುತ ಪ್ರದೇಶವು ಲಘು ಬೇಸಿಗೆ ಮತ್ತು ಅತ್ಯಂತ ಶೀತಲ ಚಳಿಗಾಲವನ್ನು ಅನುಭವಿಸುತ್ತದೆ. ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಈ ತಾಣಕ್ಕೆ ಭೇಟಿ ನೀಡುವುದು ಸೂಕ್ತ. ಅದರಲ್ಲೂ ಮೇ ಯಿಂದ ಸೆಪ್ಟಂಬರವರೆಗಿನ ದಿನಗಳು ತಂಪಾದ ಬೇಸಿಗೆಯನ್ನು ಹೊಂದಿರುತ್ತಿದ್ದು ತಾಪಮಾನ ಕನಿಷ್ಠ 5 °ಸಿ ನಿಂದ  ಗರಿಷ್ಠ  40 ° ಸಿ ವ್ಯಾಪ್ತಿಯಲ್ಲಿ ಬದಲಾಗುತ್ತಿರುತ್ತದೆ. ಅಲ್ಲದೆ ಜುಲೈನಿಂದ ಸೆಪ್ಟಂಬರವರೆಗಿರುವ ಮಳೆಗಾಲದಲ್ಲೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಆದರೆ ಚಳಿಗಾಲದಲ್ಲಿ, ಅದರಲ್ಲೂ ಅಕ್ಟೋಬರ್ ಮತ್ತು ಫೆಬ್ರವರಿಯಲ್ಲಿ ಇಲ್ಲಿಯ ತಾಪಮಾನ   -14° ಸಿ ನಷ್ಟು ಇಳಿಮುಖವಾಗುತ್ತಿದ್ದು 24° ಸಿ ಗಿಂತ ಹೆಚ್ಚಾಗುವದಿಲ್ಲ. ಆದ್ದರಿಂದ ಪ್ರವಾಸಿಗರು ಈ ತಿಂಗಳುಗಳಲ್ಲಿ ಅಲ್ಲಿಗೆ ಹೋಗುವದು ಅಷ್ಟೊಂದು ಸೂಕ್ತವಲ್ಲ.

204 ಕಿ.ಮಿ.ದೂರವಿರುವ ಲೇಹ್ ವಾಯುನೆಲೆಯಿಂದ ಪಂಗೊಂಗ್ ಗೆ ತಲುಪಬಹುದು. ಜಮ್ಮು ತಾವಿ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಟ್ಯಾಕ್ಸಿಗಳು ಮತ್ತು ಕ್ಯಾಬ್ಗಳ ಮೂಲಕವೂ ಸರೋವರವನ್ನು ತಲುಪಬಹುದು. ಅಲ್ಲದೆ ಹತ್ತಿರದ ಬಸ್ ನಿಲ್ದಾಣವಾದ ಜಮ್ಮುವಿನ ಫ್ಯಂಗ್ ತ್ರೊಕ್ಪೊ ಬಸ್ ನಿಲ್ದಾಣದಿಂದಲೂ  ಪಂಗೊಂಗ್ ತಲುಪಬಹುದು. ಪಂಗೊಂಗ್ನಿಂದ ಇದು 120 ಕಿ.ಮಿ ದೂರದಲ್ಲಿದೆ.

ಪಂಗೊಂಗ್ ಪ್ರಸಿದ್ಧವಾಗಿದೆ

ಪಂಗೊಂಗ್ ಹವಾಮಾನ

ಉತ್ತಮ ಸಮಯ ಪಂಗೊಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಂಗೊಂಗ್

  • ರಸ್ತೆಯ ಮೂಲಕ
    ಆಸಕ್ತ ಪ್ರವಾಸಿಗರು ಬಾಡಿಗೆ ಕಾರುಗಳು ಅಥವಾ ಖಾಸಗಿ ವಾಹನಗಳ ಮೂಲಕ ಪಂಗೊಂಗ್ ಗೆ ಭೇಟಿ ನೀಡಬಹುದು. ಅನೇಕ ಬಾಡಿಗೆ ಏಜೆನ್ಸಿಗಳು ಪಂಗೊಂಗ್ ಪ್ರವಾಸಿಗರಿಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರವಾಹನಗಳನ್ನು ಬಾಡಿಗೆಗೆ ಒದಗಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮುವಿನ ತಾವಿ ರೈಲ್ವೆ ನಿಲ್ದಾಣವು ಪಂಗೊಂಗ್ ಗೆ ಹತ್ತಿರದ ರೈಲುತುದಿಯಾಗಿದೆ. ಇದು ರೈಲ್ವೆ ಜಂಕ್ಷನ್ ಆಗಿದ್ದು, ದೆಹಲಿ, ಚಂಡೀಘಢ, ಶ್ರೀನಗರ, ಗೋವಾ, ಮುಂಬೈ, ತಿರುವನಂತಪುರಗಳಂತಹ ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲೇಹ್ ವಾಯುನೆಲೆಯು ಪಂಗೊಂಗ್ ನಿಂದ 202 ಕಿಮೀ ದೂರದಲ್ಲಿದೆ. ಆದರೂ ಇದುವೇ ಪಂಗೊಂಗ್ ನ ಹತ್ತಿರದ ವಾಯುನೆಲೆ. ಈ ವಿಮಾನ ನಿಲ್ದಾಣವು ದೆಹಲಿ, ಜಮ್ಮು ಮತ್ತು ಶ್ರೀನಗರದಂತಹ ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವಿದೇಶಿ ಪ್ರವಾಸಿಗರು ದೆಹಲಿಯ ಮೂಲಕ ಲೇಹ್ ವಾಯುನೆಲೆಗೆ ಸಂಪರ್ಕಿಸುವ ವಿಮಾನವೇರಬಹುದು. ಬಸ್ ಮತ್ತು ಟ್ಯಾಕ್ಸಿಗಳು ಲೇಹ್ ವಿಮಾನನಿಲ್ದಾಣದಿಂದ ಸುಲಭವಾಗಿ ಪಂಗೊಂಗ್ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City