Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಚಕುಲ » ಆಕರ್ಷಣೆಗಳು » ಮೋರಿನಿ ಬೆಟ್ಟಗಳು

ಮೋರಿನಿ ಬೆಟ್ಟಗಳು, ಪಂಚಕುಲ

8

ಮೋರಿನಿ ಬೆಟ್ಟಗಳು ಅಥವ ಭೋಜ್ ಜಬಿಯಾಲ್ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ. ಇದು ಹರಿಯಾಣದ ಅತಿ ಎತ್ತರ ಪ್ರದೇಶಗಳಲ್ಲೊಂದು. ಇದು ಚಂಡಿಗಢದಿಂದ 45 ಕಿಮೀ ದೂರದಲ್ಲಿದೆ. ಈ ಪ್ರದೇಶವನ್ನು ಹಿಂದೊಮ್ಮೆ ಆಳಿದ ರಾಣಿಯ ಹೆಸರಿನಲ್ಲಿ ಕರೆಯಲಾಗುತ್ತದೆ. ಹಿಮಾಲಯದ ಸಾಗರಗಳು ಮತ್ತು ವಿವಿಧ ಸಸ್ಯಗಳನ್ನು ನೋಟವನ್ನು ಇಲ್ಲಿಂದ ಕಾಣವುದು ಅಭೂತಪೂರ್ವ ಅನುಭವ.

ಮೋರಿನಿ ಬೆಟ್ಟಗಳು ಹಿಮಾಲಯದ ಶಿವಾಲಿಕ್ ಬೆಟ್ಟಗಳ ಒಂದು ಭಾಗ. ಈ ಬೆಟ್ಟವಲ್ಲದೆ ಹಳ್ಳಿಯೊಂದಕ್ಕೆ ಕೂಡ ಇದೇ ಹೆಸರಿದೆ. ಎರಡು ಕೊಳಗಳು ಈ ಬೆಟ್ಟಗಳ ನಡುವಿದೆ. ಇವೆರಡೂ ಕೊಳಗಳನ್ನು ಬೆಟ್ಟ ವಿಭಾಗ ಮಾಡುತ್ತದೆಯಾದರೂ ಇವೆರೆಡರ ನಡುವೆ ಒಳಸಂಪರ್ಕವಿದೆ. ಹಾಗಾಗಿ ಎರಡೂ ಕೊಳಗಳಲ್ಲಿನ ನೀರಿನ ಮಟ್ಟ ಒಂದೇ ರೀತಿಯಿರುತ್ತದೆ. ಈ ಕೊಳಗಳನ್ನು ಸ್ಥಳೀಯರು ಪವಿತ್ರವಾದದ್ದೆಂದು ಭಾವಿಸುತ್ತಾರೆ.

ಹರಿಯಾಣ ಸರ್ಕಾರವು ಪ್ರವಾಸಿಗರ ಮತ್ತು ಚಾರಣಿಗರ ಅನುಕೂಲಕ್ಕಾಗಿ ರೆಸಾರ್ಟ್ಗಳನ್ನು ನಿರ್ಮಿಸಿದೆ. ಹರಿಯಾಣದ ರಾಜ್ಯ ಹೆದ್ದಾರಿಯು ಮೋರಿನಿ ಬೆಟ್ಟಗಳ ದಾರಿಯನ್ನು ಸಂಪರ್ಕಿಸುತ್ತದೆ. ಈ ರಸ್ತೆಗಳು ಚಂಡಿಗಢ ಮತ್ತಿತರ ಹತ್ತಿರದ ಪಟ್ಟಣಗಳನ್ನು ಬೆಸೆಯುತ್ತದೆ.

ಭಾರತೀಯ ಅರಣ್ಯ ಇಲಾಖೆ ಮತ್ತು ಪಿಡಬ್ಲ್ಯೂಡಿಗಳು ವಿಶ್ರಾಂತಿ ಗೃಹಗಳನ್ನು ಕೂಡ ನಿರ್ಮಿಸಿದೆ. ಈಜುಕೊಳ, ಸ್ಕೆಟಿಂಗ್ ಟ್ರ್ಯಾಕ್ ಮತ್ತು ಮಕ್ಕಳಿಗೆ ಆಟದ ಮೈದಾನವು ಇಲ್ಲಿದೆ. ಇಲ್ಲೊಂದು ಪಾಳುಬಿದ್ದ ಕೋಟೆಯಿದೆ. ಮೋರಿನಿ ಬೆಟ್ಟಗಳು ಚಾರಣಪ್ರಿಯರ ಸ್ವರ್ಗವೆನಿಸಿದೆ.

ಟಿಕ್ಕಾರ್ ತಾಲ್, ಬಾಬಾ ಟಿಕ್ಕರ್ ಮತ್ತು ಛೋಟ ಟಿಕ್ಕರ್ಗಳು ಮೋರಿನಿ ಬೆಟ್ಟಗಳಲ್ಲಿನ ಮನುಷ್ಯ ನಿರ್ಮಿತ ಕೊಳಗಳು. ಹರಿಯಾಣ ಪ್ರವಾಸೋದ್ಯಮವು ಟಿಕ್ಕರ್ ತಾಲ್ನಲ್ಲಿ ಉಳಿಯುವ ಕ್ಯಾಂಪರ್ಗಳಿಗಾಗಿ ವಸತಿ ವ್ಯವಸ್ಥೆಯನ್ನು ಮಾಡಿದೆ. ಈ ಕೊಳಗಳು ಮೋರಿನಿ ಪಟ್ಟಣದಿಂದ 7 ಕಿಮೀ ದೂರದಲ್ಲಿದೆ. ಇಲ್ಲಿನ ಸುತ್ತಲ ಪರಿಸರವು ಕ್ಯಾಂಪ್ ಮಾಡಲು ಸೂಕ್ತವಾಗಿದೆ.

ಈ ಕೊಳಗಳು ಪಂಚಕುಲದ ಸಾಹಸ ಉದ್ಯಾನಕ್ಕೆ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಉದ್ಯಾನವನ್ನು ಹರಿಯಾಣ ಪ್ರವಾಸೋದ್ಯಮವು 2004ರಲ್ಲಿ ಸಣ್ಣ ಕೊಳದ ಬಳಿ ಉದ್ಘಟಿಸಲಾಯಿತು. ಇದರ ಉದ್ದೇಶವೆಂದರೆ ಹಿಮಾಲಯದ ಕೆಳಭಾಗವನ್ನು ಚಾರಣ ಸಾಹಸಿಗರ ನಡುವೆ ಜನಪ್ರಿಯಗೊಳಿಸುವುದು. ಲೋ ರೋಪ್ಗಳು, ಕಮಾಂಡೋ ನೆಟ್ಗಳು, ಬರ್ಮಾ ಬ್ರಿಡ್ಜ್, ಬೋಟಿಂಗ್, ಕ್ಯಾನೋಯಿಂಗ್, ಕಯಾಕಿಂಗ್, ಸೈಲಿಂಗ್, ರಪ್ಪೆಲಿಂಗ್ ಮತ್ತು ರಾಕ್ ಕ್ಲೈಂಬಿಂಗ್ ಇಲ್ಲಿನ ಕೆಲವು ಚಟುವಟಿಕೆಗಳು.

ಇಲ್ಲಿನ ವಾತಾವರಣ ಮತ್ತು ಪ್ರದೇಶವು ಚಾರಣಕ್ಕೆ ಹೇಳಿಮಾಡಿಸಿದಂತಿದೆ. ಘಗ್ಗರ್ ನದಿಯು ಈ ಕಣಿವೆಗಳಲ್ಲಿ ಹರಿಯುತ್ತದೆ. ಬೆಟ್ಟದ ಮೇಲಿರುವ ಹೋಟಲಿನಿಂದ ಈ ಕಣಿವೆಯ ರಮ್ಯ ನೋಟವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ಹಸಿರು ಲಾನ್ ಮತ್ತು ಬಾರ್ ಇದೆ. ಬೆಟ್ಟದ ಮೇಲ್ಭಾಗವನ್ನು ಪೈನ್ ವೃಕ್ಷಗಳು ಆವರಿಸಿಕೊಂಡಿವೆ. ಘಗ್ಗರ್ ನದಿಯ ಚಾರಣ ಕೂಡ ಸಾಹಸಮಯವಾಗಿದ್ದು ಇಲ್ಲಿಗೆ ನೇರ ಹಾದಿಯಿದೆ.

ನಗರದ ಸದ್ದುಗದ್ದಲಗಳಿಂದ ದೂರಾಗಿ ಪ್ರಕೃತಿಯ ಮಡಿಲಲ್ಲಿ ವಿಶ್ರಮಿಸಲು ಮೋರಿನಿ ಬೆಟ್ಟಗಳು ಸೂಕ್ತ ಪ್ರದೇಶ. ಈ ಪ್ರದೇಶವನ್ನು ಸಂಪೂರ್ಣವಾಗಿ ಶೋಧಿಸಿಲ್ಲವಾದ್ದರಿಂದ ಹಲವು ಸಂಗತಿಗಳು ಪ್ರವಾಸಿಗರಿಗೆ ರಹಸ್ಯವಾಗಿಯೇ ಉಳಿದಿದೆ. ಸಸ್ಯವೈವಿಧ್ಯವನ್ನು ಹಾದಿಯುದ್ದಕ್ಕೂ ಕಾಣಬಹುದಾಗಿದೆ. ಇಲ್ಲಿ ವಾಸಿಸುತ್ತಿರುವ ಹಳ್ಳಿಗರ ಮೂಲಭೂತ ಉದ್ಯೋಗ ವ್ಯವಸಾಯವಾಗಿದೆ.

ನೀಮ್, ಪೀಪಲ್, ಜಮೂನ್, ಧಾಕ್ ಮತ್ತು ಪೈನ್ ಮರಗಳು ಮೋರಿನಿ ಬೆಟ್ಟಗಳ ಸುತ್ತಲೂ ಹಸಿರನ್ನು ತುಂಬಿವೆ. ಈ ಮರಗಳು ವಸಂತದ ಸಮಯದಲ್ಲಿ ಹೂ ಬಿಡುವುದರಿಂದ ಕಣ್ಣುಗಳಿಗೆ ರಸದೌತಣ ನೀಡುತ್ತದೆ. ಡವ್ ಮೊದಲಾದ ಬೆಟ್ಟ ಪ್ರದೇಶದ ಹಕ್ಕಿಗಳನ್ನು ಇಲ್ಲಿ ಕಾಣಬಹುದಾಗಿದೆ. ಸಾಂಬಾರ್ ಜಿಂಕೆಗಳು, ಹೈನಾ ಮತ್ತು ಕಾಡು ಬೆಕ್ಕುಗಳನ್ನು ಈ ಬೆಟ್ಟಗಳಲ್ಲಿ ಕಾಣಬಹುದು.

ಹರಿಯಾಣ ಪ್ರವಾಸೋದ್ಯಮವು ಪ್ರವಾಸಿ ಪ್ಯಾಕೇಜ್ಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ರೂಪಿಸಿದೆ. ವಸತಿ ಮತ್ತು ಸ್ಲೀಪಿಂಗ್ ಬ್ಯಾಗುಗಳನ್ನು ನೀಡುತ್ತದೆ. ಈ ಪ್ಯಾಕೇಜ್ನಲ್ಲಿ ಸಾರಿಗೆ ಸೇರಿಲ್ಲ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun