Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಚಕುಲ » ಆಕರ್ಷಣೆಗಳು » ಕಾಕ್ಟಸ್ ಅಥವ ಪಾಪಾಸುಕಳ್ಳಿ ಉದ್ಯಾನವನ

ಕಾಕ್ಟಸ್ ಅಥವ ಪಾಪಾಸುಕಳ್ಳಿ ಉದ್ಯಾನವನ, ಪಂಚಕುಲ

1

ಪಂಚಕುಲದ ಕಾಕ್ಟಸ್ ಉದ್ಯಾನವನವು ಏಷ್ಯಾದಲ್ಲೇ ಅತಿ ದೊಡ್ಡದಾದ ಈ ಮಾದರಿಯ ಉದ್ಯಾನವನ. ಇಲ್ಲಿ ಅಪರೂಪದ ಮತ್ತು ಅಪಾಯದಂಚಿನಲ್ಲಿರುವ ಕಾಕ್ಟಸ್ ತಳಿಗಳನ್ನು ಕಾಣಬಹುದು. ಇಲ್ಲಿ ಹಲ ಬಗೆಯ ಪಾಪಾಸುಕಳ್ಳಿಗಳನ್ನು ಸಂಗ್ರಹಿಸಲಾಗಿದೆ. ಒಪ್ಯುನ್ಟಿಯಸ್, ಫೆರೊಕಾಕ್ಟಸ್, ಅಗಾವೆಸ್, ಕೊಲುಮ್ನಾರ್ ಕಾಕ್ಟಿ, ಎಚಿನೊಸೆರೆಸ್ ಮತ್ತು ಮಮ್ಮಿಲರಿಯಸ್ ಇವು ಈ ಉದ್ಯಾನದಲ್ಲಿ ಕಂಡುಬರುವ ಕೆಲವು ಬಗೆಯ ಕಾಕ್ಟಸ್ಗಳು.ದಿ ನ್ಯಾಷನಲ್ ಕಾಕ್ಟಸ್ ಅಂಡ್ ಸುಕ್ಕ್ಯುಲೆಂಟ್ ಬೊಟಾನಿಕಲ್ ಗಾರ್ಡನ್ ಅಂಡ್ ರಿಸರ್ಚ್ ಸೆಂಟರ್ ಸೆಕ್ಟರ್-5ರಲ್ಲಿದೆ. ಡಾ.ಜೆ.ಎಸ್. ಸರ್ಕಾರಿಯ ಈ ಉದ್ಯಾನದ ಮುಖ್ಯ ವಾಸ್ತುಶಿಲ್ಪಿ. ಇವರು ಈ ಉದ್ಯಾನಕ್ಕೆ ಹಲವು ಬಗೆಯ ಕಾಕ್ಟಸ್ ಮತ್ತು ಸಕ್ಕ್ಯುಲೆಂಟ್ ತಳಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇಲ್ಲಿನ ಶೈಕ್ಷಣಿಕ ವಿಭಾಗದಲ್ಲಿ ಬೋನ್ಸಾಯ್ಗಳನ್ನು ಕಾಣಬಹುದು.

ಈ ಉದ್ಯಾನವು ಅಪಾಯದಂಚಿನಲ್ಲಿರುವ ತಳಿಗಳನ್ನು ಉದ್ದೇಶವನ್ನು ಹೊಂದಿದೆ. ಜಿನಸ್ ಕರಲ್ಲುಮ ಎನ್ನುವ ಭಾರತೀಯ ಮೂಲದ ಕಾಕ್ಟಸ್ ತಳಿಯನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ 2500 ಬಗೆಯ ಕಾಕ್ಟಿ ಮತ್ತು ಸುಕ್ಕ್ಯುಲೆಂಟ್ಗಳನ್ನು ಕಾಣಬಹುದಾಗಿದೆ.

ಈ ಸಸ್ಯಗಳ ಬಗ್ಗೆ ವಿಶೇಷ ಆಸಕ್ತಿಯಿರುವ ಸಸ್ಯಶಾಸ್ತ್ರಜ್ಞರು ಮತ್ತು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸಸ್ಯಗಳ ವೈದ್ಯಕೀಯ ಗುಣಗಳು ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಕಾಕ್ಟಸ್ ಷೋಗಳನ್ನು ನಡೆಸಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಆಸಕ್ತರು ಈ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಈ ಉದ್ಯಾನದಲ್ಲಿ ಒಂಭತ್ತು ಗಾಜಿನ ಮನೆಗಳಿವೆ. ಸಸ್ಯಗಳನ್ನು ಇಲ್ಲಿ ಮಾರಾಟ ಕೂಡ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat