ಸುಮಾರು ಹತ್ತನೆಯ ಶತಮಾನದಲ್ಲಿ ನಿರ್ಮಾಣಗೊಂಡಿರುವ ನವಲಖ ದೇವಾಲಯವು ಪಾಲಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ನೌಲಖ ಜೈನ ದೇವಾಲಯವೆಂದು ಸಹ ಕರೆಯಲ್ಪಡುವ ಇದನ್ನು, ಜೈನರ 23ನೆಯ ತೀರ್ಥಂಕರನಾದ ಪಾರ್ಶ್ವನಾಥನಿಗಾಗಿ ನಿರ್ಮಿಸಲಾಗಿದೆ. ತನ್ನ ವಾಸ್ತುಶಿಲ್ಪ ಶೈಲಿಗೆ ಪ್ರಸಿದ್ಧಿ ಪಡೆದಿರುವ ಈ ದೇವಾಲಯವು ವಿಸ್ತಾರವಾದ ಕೆತ್ತನೆಗಳಿಗೆ ಖ್ಯಾತಿ ಪಡೆದಿದೆ.